Advertisement

Texas ಡೈರಿ ಫಾರ್ಮ್‌ ನಲ್ಲಿ ಸ್ಫೋಟ: 18,000 ಕ್ಕೂ ಹೆಚ್ಚು ಹಸುಗಳು ಸಾವು

11:57 AM Apr 14, 2023 | Team Udayavani |

ಟೆಕ್ಸಾಸ್: ಇಲ್ಲಿನ ಸೌತ್‌ ಫೋರ್ಕ್ ಡೈರಿ ಫಾರ್ಮ್‌ ನಲ್ಲಿ ಸ್ಫೋಟ ಸಂಭವಿಸಿದ ಬೆಂಕಿ ಹೊತ್ತಿಕೊಂಡ ಕಾರಣ 18,000 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

Advertisement

ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಬಂಧಿತ ಕುಟುಂಬವು ಘಟನೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ:Affidavit;ಎಸ್‌. ಮಲ್ಲಿಕಾರ್ಜುನ್‌ 152 ಕೋಟಿ ಒಡೆಯ; ಸುಧಾಕರ್‌ ಕೈಯಲ್ಲಿ 10,600 ರೂ. ನಗದು

ಅಗ್ನಿಶಾಮಕ ದಳದವರು ಉರಿಯುತ್ತಿರುವ ಕಟ್ಟಡದೊಳಗೆ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಜಮೀನಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next