ಚಂಡೀಗಢ : ಗೋಲ್ಡನ್ ಟೆಂಪಲ್ ಬಳಿ ಬುಧವಾರ ತಡರಾತ್ರಿ ಮತ್ತೊಂದು ಸ್ಫೋಟ ಸಂಭವಿಸಿದೆ. ಇದು ಒಂದೇ ವಾರದಲ್ಲಿ ನಡೆದ ಮೂರನೇ ಪ್ರಕರಣವಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯಂತೆ ಬುಧವಾರ ರಾತ್ರಿ 12.30 ರ ಸುಮಾರಿಗೆ ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಸ್ಪೋಟದ ಸದ್ದು ಕೇಳಿದೆ.
ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳು ಸ್ಪೋಟಕ್ಕೆ ಐಇಡಿ ಗಳನ್ನು ಬಳಸಿದ್ದರು ಎನ್ನಲಾಗಿದೆ.
ನಗರದಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಸ್ಪೋಟಕಗಳನ್ನು ಬಳಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Related Articles
ಇದಕ್ಕೂ ಮೊದಲು, ಮೇ 6 ಮತ್ತು ಮೇ 8 ರಂದು ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ್ದವು, ಇದರಲ್ಲಿ ಆರು ಮಂದಿ ಗಾಯಗೊಂಡಿದ್ದರು. ಇಂದು ನಡೆದ ಸ್ಪೋಟದಲ್ಲಿ ಯಾವುದೇ ಗಾಯಗಳಾದ ವರದಿಯಾಗಿಲ್ಲ ಎನ್ನಲಾಗಿದೆ.