Advertisement

ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ

08:22 PM Jan 20, 2021 | Team Udayavani |

ಮoಡ್ಯ: ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಮಂಗಳವಾರ ಗಸ್ತಿನಲ್ಲಿದ್ದ ವೇಳೆ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ಲಾರಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

Advertisement

ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ವೇಳೆಯಲ್ಲಿ ಭೇರ್ಯದಿಂದ ಶ್ರೀರಂಗಪಟ್ಟಣಕ್ಕೆ ಯಾವುದೇ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಕೆಎ-09, ಡಿ-7614 ಟೆಂಪೋದಲ್ಲಿ ಸುಮಾರು 1750 ಕೆಜಿ ಜಿಲೆಟಿನ್ ಕಡ್ಡಿ ಹಾಗೂ 1600 ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು.

ಈ ವೇಳೆ ಗ್ರಾಮಾಂತರ ಠಾಣೆಯ ಸುರೇಶ್ ನೇತೃತ್ವದ ಪೋಲಿಸರ ತಂಡ ದಾಳಿ ನಡೆಸಿದೆ. ದಾಳಿಯ ವೇಳೆ ಸ್ಫೋಟಕ ಮತ್ತು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:  ಕರ್ನಾಟಕದ ಗಡಿ ಭಾಗಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ರಮೇಶ್ ಜಾರಕಿಹೊಳಿ‌ 

Advertisement

Udayavani is now on Telegram. Click here to join our channel and stay updated with the latest news.

Next