Advertisement

ಕೆನಡಾ: ಭಾರತೀಯ ಹೊಟೇಲ್‌ನಲ್ಲಿ ಸ್ಫೋಟ; 15 ಮಂದಿಗೆ ಗಾಯ 

11:07 AM May 25, 2018 | |

ಒಟ್ಟಾವಾ : ಕೆನಡಾದ ಮಿಸ್ಸಿಸೌಗಾ ಎಂಬ ನಗದಲ್ಲಿ  ಭಾರತೀಯ ಹೊಟೇಲ್‌ವೊಂದರಲ್ಲಿ  ಗುರುವಾರ ರಾತ್ರಿ 10.30 ರ ವೇಳೆಗೆ ಸಂಭವಿಸಿದ ಸ್ಫೋಟವೊಂದರಲ್ಲಿ  ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. 

Advertisement

ಹುರೊಂಟಾರಿಯೋ ರಸ್ತೆಯಲ್ಲಿರುವ ಬಾಂಬೆ ಭೇಲ್‌ ಹೊಟೇಲ್‌ನಲ್ಲಿ ಸ್ಫೋಟ ನಡೆದಿದ್ದು , ಮೂವರು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳುಗಳನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಸ್ಫೋಟದ ತೀವ್ರತೆಗೆ  ಹೊಟೇಲ್‌ನ ಗಾಜುಗಳು ಪುಡಿ ಪುಡಿಯಾಗಿ ಹೋಗಿರುವ ಬಗ್ಗೆ ತಿಳಿದು ಬಂದಿದೆ. 

ಸ್ಫೋಟಕ್ಕೆ ಕಾರಣವೇನೆಂಬುದು ಇದುವರೆಗೆ ತಿಳಿದು ಬಂದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next