Advertisement

Explained: ಭಾರತದಲ್ಲಿ ಪತ್ತೆಯಾದ ರೂಪಾಂತರ ತಳಿಗೆ ಕಪ್ಪಾ, ಡೆಲ್ಟಾ ಎಂದು ಹೆಸರಿಟ್ಟಿದ್ದೇಕೆ?

10:38 AM Jun 02, 2021 | Team Udayavani |

ನವದೆಹಲಿ: ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಾಣುವಿನ B.1617.1 ಮತ್ತು B.1.617.2 ರೂಪಾಂತರಿಯ ಈ ಹೆಸರನ್ನು ಕ್ರಮವಾಗಿ “ಕಪ್ಪಾ” ಮತ್ತು “ಡೆಲ್ಟಾ” ಎಂದು ನೂತನವಾಗಿ ಹೆಸರಿಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

Advertisement

ಇದನ್ನೂ ಓದಿ:ದೂಧ್ ಸಾಗರ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ

ವಿಶ್ವ ಆರೋಗ್ಯ ಸಂಸ್ಥೆ ಕೇವಲ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿಯ ಹೆಸರನ್ನು ಮರುನಾಮಕರಣ ಮಾಡಿದ್ದಲ್ಲದೇ, ಇತರ ರೂಪಾಂತರಿ ಸೋಂಕುಗಳಿಗೂ ಗ್ರೀಕ್ ವರ್ಣಮಾಲೆಯ ಹೆಸರನ್ನು ಇಡುವುದಾಗಿ ತಿಳಿಸಿದೆ.

ಡೆಲ್ಟಾ ಮತ್ತು ಕಪ್ಪಾ ಕೂಡಾ ಗ್ರೀಕ್ ವರ್ಣಮಾಲೆಯಲ್ಲಿನ ಅಕ್ಷರವಾಗಿದ್ದು ಅದು ಇಂಗ್ಲಿಷ್ ನ ಅಕ್ಷರಕ್ಕೆ ತತ್ಸಮಾನವಾದದ್ದು, ಈ ರೀತಿ ಎಲ್ಲರಿಗೂ ಹೆಚ್ಚು ತಾಂತ್ರಿಕವಾಗಿರದ, ಸುಲಭವಾಗಿ ಉಚ್ಛರಿಸಲು ಸಾಧ್ಯವಾಗುವಂಥ ಹೆಸರುಗಳನ್ನು ಇಡುವುದರಿಂದ ಅವುಗಳನ್ನು ಗುರುತಿಸುವುದು ಅನುಕೂಲಕರ ಎಂದು ಡಬ್ಲ್ಯುಎಚ್ ಒ ತಿಳಿಸಿದೆ.

Advertisement

ಇದನ್ನೂ ಓದಿ:ನಿಯಮ ಮೀರಿ ವಾಕಿಂಗ್ ಮಾಡುತ್ತಿದ್ದ 50 ಕ್ಕೂ ಹೆಚ್ಚಿನ ಮಂದಿಗೆ ಪೊಲೀಸರಿಂದ ವ್ಯಾಯಾಮ ಕ್ಲಾಸ್.!

ಭಾರತದಲ್ಲಿ ಪತ್ತೆಯಾದಂತೆ ಬ್ರಿಟನ್ ನಲ್ಲಿ ಮೊದಲು ಪತ್ತೆಯಾದ ಇಂತಹ ರೂಪಾಂತರಿ ತಳಿಗೆ B.1.1.7 ಎಂದು ಕರೆಯಲಾಗುತ್ತಿದ್ದು, ಅದನ್ನು “ಆಲ್ಫಾ” ಎಂದು ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ B.1.351 ಕೋವಿಡ್ ರೂಪಾಂತರಿ ತಳಿಗೆ ಬೀಟಾ ಎಂದು ಹೆಸರಿಸಲಾಗಿದೆ.

3ನೇ ರೂಪಾಂತರಿ ತಳಿ ಬ್ರೆಜಿಲ್ ನಲ್ಲಿ ಪತ್ತೆಯಾಗಿದ್ದು, ಅದನ್ನು ಗಮ್ಮಾ ಎಂದು ಕರೆಯಾಗಿದೆ. ಅಮೆರಿಕದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನಲ್ಲಿ ಪತ್ತೆಯಾದ ರೂಪಾಂತರಿಗೆ ಥೇಟಾ ಎಂದು ನಾಮಕರಣ ಮಾಡಲಾಗಿದೆ.

ಭಾರತ ಆಕ್ಷೇಪ ವ್ಯಕ್ತಪಡಿಸಿದ್ದೇಕೆ?
ಜಗತ್ತಿನಾದ್ಯಂತ ಕಳವಳ ಮೂಡಿಸಿರುವ ಕೋವಿಡ್ ರೂಪಾಂತರಿ ತಳಿಗೆ ಮೂರು ವಾರಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಮರು ನಾಮಕರಣ ಮಾಡುವ ನಿರ್ಧಾರ ತೆಗೆದುಕೊಂಡಾಗ ಯಾವುದೇ ಆಧಾರವಿಲ್ಲದೇ ಭಾರತೀಯ ರೂಪಾಂತರ ತಳಿ ಎಂದು ಬಳಸುತ್ತಿದ್ದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. B.1617 ರೂಪಾಂತರಿ ತಳಿಯನ್ನು ಇಂಡಿಯನ್ ವೆರಿಯಂಟ್ ಎಂದು ಬಳಸಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿ, ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಕೂಡಾ ಭಾರತದ ರೂಪಾಂತರ ಎಂಬ ಹೆಸರನ್ನು ನೀಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ವಿಶ್ವ ಆರೋಗ್ಯ ಸಂಸ್ಥೆಯು ಈ ನಿರ್ಧಾರ
ತೆಗೆದುಕೊಂಡಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next