Advertisement
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಚೀನ, ವಿಯೆಟ್ನಾಂ, ಮೆಕ್ಸಿಕೋ ಮತ್ತು ಥಾಯ್ಲೆಂಡ್‌ಗೆ ಹೋಲಿಸಿದರೆ, ಭಾರತದ ಸಾಧನೆ ಅತ್ಯಂತ ಕಡಿಮೆ. ಇವೆಲ್ಲವೂ ಕಡಿಮೆ ದರದಲ್ಲಿ ಕಾರ್ಮಿಕರು ಸಿಗುವ ದೇಶಗಳಾಗಿವೆ. ಅಂದರೆ, 1980ರ ಸಾಲಿಗೆ ಹೋಲಿಕೆ ಮಾಡಿದರೆ, ಆಗ 35ನೇ ಸ್ಥಾನದಲ್ಲಿದ್ದ ಚೀನಾ ಈಗ ನಂ.1 ಸ್ಥಾನಕ್ಕೇರಿದೆ. 1990ರಲ್ಲಿ ಒಂದೇ ಒಂದು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಫ್ತು ಮಾಡದಿದ್ದ ವಿಯೆಟ್ನಾಂ ಇಂದು 8ನೇ ಸ್ಥಾನ ಪಡೆದಿದೆ. ಹಾಗೆಯೇ ಮೆಕ್ಸಿಕೋ 1980ರಲ್ಲಿ 37ನೇ ಸ್ಥಾನದಲ್ಲಿದ್ದು, ಈಗ 11ನೇ ಸ್ಥಾನಕ್ಕೇರಿದೆ. ಇನ್ನು ಥಾಯ್ಲೆಂಡ್ ದೇಶ 1980ರಲ್ಲಿ 45ನೇ ಸ್ಥಾನದಲ್ಲಿದ್ದು, ಈಗ 15ನೇ ಸ್ಥಾನಕ್ಕೇರಿದೆ. ಆದರೆ, 1980ರಲ್ಲಿ ಭಾರತ 40ನೇ ಸ್ಥಾನದಲ್ಲಿತ್ತು. ಈಗ ಇದು 28ನೇ ಸ್ಥಾನಕ್ಕೆ ಏರುವಲ್ಲಿ ಮಾತ್ರ ಸಫಲವಾಗಿದೆ.
ಚೀನಾವಾಗಲಿ, ವಿಯೆಟ್ನಾಂ ಆಗಲಿ ಅಥವಾ ಉಳಿದ ದೇಶಗಳು ಟ್ಯಾರಿಫ್ ಹೆಚ್ಚಳದ ನೀತಿಗೆ ಹೋಗಿಲ್ಲ. ಆದರೆ, ಭಾರತ ಮಾತ್ರ ಅಮೆರಿಕದ ರೀತಿಯಲ್ಲಿ ಟ್ಯಾರಿಫ್ ಹೆಚ್ಚಳದ ನೀತಿಗೆ ಹೋಗಿದೆ. ಭಾರತದಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಟ್ಯಾರಿಫ್ ಹೆಚ್ಚಳದ ನೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿರುವ ಹೂಡಿಕೆದಾರರು ಮತ್ತು ಸಲಕರಣೆಗಳ ಉತ್ಪಾದಕರು ಭಾರತದಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿಯೇ ನಮ್ಮದು ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎಂದು ವರದಿ ತಿಳಿಸಿದೆ. ಅಲ್ಲದೆ, ಇಲ್ಲಿಗೆ ಬಂದು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಬೇಕಾದರೂ, ಬೇರೆ ದೇಶದಿಂದ ಇದಕ್ಕೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುವುದು ದುಬಾರಿಯಾಗುತ್ತದೆ. ಹೀಗಾಗಿಯೇ ಅವರು ಹಿಂದೆ ಸರಿಯುತ್ತಿದ್ದಾರೆ. ಇಂಡಸ್ಟ್ರಿ ಹೇಳುವುದೇನು?
ಟ್ಯಾರಿಫ್ ಹೆಚ್ಚಳ ನೀತಿಗಿಂತ ಹೊರತಾಗಿ ನಾವು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸ್ಪರ್ಧೆ ನೀಡಬೇಕು. ಟ್ಯಾರಿಫ್ ಹೆಚ್ಚಳದ ನೀತಿ ಕೇವಲ ಅಮೆರಿಕದಂಥ ದೇಶಗಳಿಗೆ ಅನ್ವಯವಾಗುತ್ತದೆ. ನಮ್ಮಲ್ಲಿ ಮಾರುಕಟ್ಟೆ ಸುಧಾರಿಸಿಕೊಳ್ಳಬೇಕಾದರೆ, ಪೈಪೋಟಿ ನೀಡಿಯೇ ಗೆಲ್ಲಬೇಕು ಎಂದು ಇಂಡಸ್ಟ್ರಿ ತಜ್ಞರು ಹೇಳುತ್ತಾರೆ.