ಶಿರಸಿ: ಜಿಲ್ಲೆಯಲ್ಲಿ ಮಾವು ಮತ್ತು ಗೇರು ಗಿಡಗಳಲ್ಲಿ ಹೊಸ ಚಿಗುರು ಮತ್ತು ಹೂ ಗೊಂಚಲು ಮೂಡಲು ಪ್ರಾರಂಭವಾಗುತ್ತಿದ್ದು, ಇವುಗಳ ರಕ್ಷಣೆಗೆ ತೋಟಗಾರಿಕಾ ಇಲಾಖೆ ವಿಷಯ ತಜ್ಞ ವಿ.ಎಂ. ಹೆಗಡೆ ಶಿಂಗನಮನೆ ರೈತರಿಗೆ ಸಲಹೆ ನೀಡಿದ್ದಾರೆ.
ಮಾವಿನಲ್ಲಿ ಜಿಗಿಹುಳು ಮತ್ತು ಗೇರಿನಲ್ಲಿ ಟಿ ಸೊಳ್ಳೆಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲನ್ನು ಚೂಪಾದ ಕೊಂಬಿನಿಂದ ಚುಚ್ಚಿ ರಸ ಹೀರುತ್ತವೆ. ಇದರಿಂದಾಗಿ ಚಿಗುರು ಎಲೆ ಮುದುಡಿ ಸುಟ್ಟಂತಾಗಿ ಒಣಗಲು ಪ್ರಾರಂಭಿಸುತ್ತವೆ. ರಸ ಹೀರಲ್ಪಟ್ಟ ಹೂ ಗೊಂಚಲುಗಳು ಕಪ್ಪಾಗಿ ಒಣಗಲು ಪ್ರಾರಂಭಿಸಿ ಹೂವು ಉದುರುವುದು. ಈ ಕೀಟದ ಬಾಧೆ ಹೆಚ್ಚಾದಾಗ ಹೂವು ಸುಟ್ಟಂತಾಗುವುದು. ಈ ರೀತಿಯಾಗಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ 25 ರಿಂದ 75ರಷ್ಟು ಫಸಲು ನಷ್ಟವಾಗುವುದು.
ಆದ್ದರಿಂದ ರೈತರು ಈ ಹಂತದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳವುದರಿಂದ ಮುಂದೆ ಆಗಬಹುದಾದ ಹಾನಿ ತಡೆಗಟ್ಟಬಹುದು. ಮಾವು ಮತ್ತು ಗೇರು ಗಿಡಗಳಲ್ಲಿ ಕಂಡು ಬರುವ ಒಣಗಿದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋಡೋì ಅಥವಾ ಕಾಪರ ಆಕ್ಸಿ ಕ್ಲೋರೈಡ್
ದ್ರಾವಣ ಹಚ್ಚಬೇಕು. ಬುಡದ ಸುತ್ತಲೂ ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು. ಗೇರು ಬೆಳೆಗೆ ನೀರಾವರಿ ಪ್ರಾರಂಭಿಸಬಹುದು. ಆದರೆ ಮಾವಿನ ಬೆಳೆಗೆ ಸಣ್ಣ ಮಿಡಿಗಾಯಿ ಆಗುವ ಹಂತದವರೆಗೂ ನೀರಾವರಿ ಪ್ರಾರಂಭಿಸಬಾರದು. ಮಾವಿನಲ್ಲಿ ಹೂ ಮೊಗ್ಗು ಹೊರಟ ನಂತರ ಹೂ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ ಅಥವಾ ಕ್ಲೋರೋಫೈರಿಫಾಸ್ 2 ಮಿಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ, ಸಿಂಪಡಿಸಬೇಕು.
ಇದರ ಜೊತೆಗೆ ಐಐಹೆಚ್‌ಆರ್ ಮ್ಯಾಂಗೋ ಸ್ಪೆಷಲ್ 5 ಗ್ರಾಂ ಪ್ರತಿ ಲೀಟರ ನೀರಿಗೆ ಸೇರಿಸಿ ಸಿಂಪಡಿಸುವುದು ಉತ್ತಮ. ನಂತರ ಹೂ ಬಿಡಲು ಪ್ರಾರಂಭವಾಗಿ ಕಡಲೇಕಾಯಿ ಗಾತ್ರದ ಮಾವಿನ ಕಾಯಿ ಆಗುವವರೆಗೆ ಜಿಗಿ ಹುಳು ಮತ್ತು ಬೂದಿ ರೋàಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್ 1.0 ಮಿ.ಲೀ ಅಥವಾ ಇಮಿಡಾಕ್ಲೋಪ್ರಿಡ್ 0.3 ಮಿ.ಲೀ. ಅಥವಾ 0.5ಮಿಲೀ ಸೈಪರಮೆಥ್ರಿನ ಇವುಗಳಲ್ಲಿ ಯಾವುದಾದರೂ ಕೀಟ ನಾಶಕದ ಜೊತೆಗೆ ಕಾರ್ಬೆಂಡೆಂಜಿಮ್ 1ಗ್ರಾಂ ಅಥವಾ ನೀರಿನಲ್ಲಿ ಕರಗುವ ಗಂಧಕ 3ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ 25-30 ದಿನಗಳಿಗೊಮ್ಮೆ ಅವಶ್ಯಕತೆಗೆ ಅನುಗುಣವಾಗಿ ಸಿಂಪಡಿಸುತ್ತಿರಬೇಕು.
ಇದನ್ನೂ ಓದಿ:ಬಿಳಿಜೋಳ ಬೆಳೆಗೂ ಹುಸಿ ಸೈನಿಕ ಹುಳುಬಾಧೆ
ಗೋಡಂಬಿ ಬೆಳೆಯಲ್ಲಿ ಟಿ ಸೊಳ್ಳೆ ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಪ್ರೊಪೆನೊಪೊಸ್ 1.5 ಮಿಲೀ ಅಥವಾ ಲ್ಯಾಂಬಾx ಸೈಲೋಥ್ರಿನ್ 0.6 ಮಿಲೀ ಅಥವಾ ಕ್ಲೋರೊಪೈರಿಫಾಸ್-50 ಇ.ಸಿ. 1.5 ಮಿಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರು, ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಇಲಾಖೆ ಶಿರಸಿ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.