Advertisement

ಒಬ್ಬನ ದೇಹಕ್ಕೆ ಮತ್ತೂಬ್ಬನ ತಲೆ ಜೋಡಿಸಲು “ಸಿದ್ಧತಾ’ಪರೀಕ್ಷೆ!

11:15 AM May 03, 2017 | Team Udayavani |

ಬೀಜಿಂಗ್‌: ದೇಹ ಒಬ್ಬನದ್ದು, ತಲೆ ಮತ್ತೂಬ್ಬನದ್ದು! ಇದನ್ನು ಸಿನಿಮಾದಲ್ಲಷ್ಟೇ ನೋಡಬಹುದು ಎಂದು ಭಾವಿಸಿದ್ದೀರಾ? ಊಹೂಂ. ಎಲ್ಲವೂ ಅಂದುಕೊಂಡಂತೆ ನಡೆದರೆ ನಿಜ ಜೀವನದಲ್ಲೂ ಇದೇ ಮೊದಲ ಬಾರಿಗೆ ಅಂತಹುದೊಂದು ಪ್ರಯತ್ನ ನಡೆಯಲಿದೆ. ಮಾನವನ ತಲೆಯನ್ನೇ ಕಸಿ ಮಾಡಿ, ಮತ್ತೂಬ್ಬನ ದೇಹಕ್ಕೆ ಕೂರಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಮುನ್ನುಡಿಯೆಂಬಂತೆ, ಒಂದು ಇಲಿಯ ದೇಹಕ್ಕೆ ಮತ್ತೂಂದು ಇಲಿಯ ತಲೆಯನ್ನು ಕಸಿ ಮಾಡಲಾಗಿದೆ.

Advertisement

ಹೌದು. ಚೀನದ ವಿಜ್ಞಾನಿಗಳು ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಮಾನವನ ಮೇಲೆ ನಡೆಯುವ “ತಲೆ ಕಸಿಗೆ’ ಪೂರ್ವಸಿದ್ಧತೆ ಎಂಬಂತೆ, ದೊಡ್ಡ ಇಲಿಯೊಂದರ ತಲೆಯ ಮೇಲೆ ಪುಟ್ಟ ಇಲಿಯ ತಲೆಯನ್ನು ಕಸಿ ಮಾಡಿದ್ದಾರೆ. ಆದರೆ, ಈ ಇಲಿಗಳು ಸರಾಸರಿ 36 ಗಂಟೆಗಳ ಕಾಲವಷ್ಟೇ ಬದುಕುಳಿದಿವೆ.

ಯಶಸ್ವಿ ಪ್ರಯೋಗ: ಚೀನದ ಹಾರ್ಬಿನ್‌ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಪ್ರಯೋಗಕ್ಕೆ ಮೂರು ಇಲಿಗಳನ್ನು ಬಳಸಿದ್ದಾರೆ. ಸಣ್ಣ ಇಲಿ ದಾನಿಯಾಗಿಯೂ ಮತ್ತೆರಡು ದೊಡ್ಡ ಇಲಿಗಳ ಪೈಕಿ ಒಂದನ್ನು ರಕ್ತದ ಪೂರೈಕೆಗೆ ಹಾಗೂ ಮತ್ತೂಂದನ್ನು ಸ್ವೀಕರ್ತನಾಗಿ ಬಳಸಲಾಯಿತು. ರಕ್ತದ ಹರಿವನ್ನು ನಿಭಾಯಿಸಲು ಸಿಲಿಕಾನ್‌ ಟ್ಯೂಬ್‌ ಮೂಲಕ ಇಲಿಗಳ ರಕ್ತನಾಳಗಳನ್ನು ಒಂದಕ್ಕೊಂದು ಸಂಪರ್ಕಿಸಲಾಯಿತು. ಅನಂತರ, ಮೂರನೇ ಇಲಿಯಿಂದ ದಾನಿ ಇಲಿಯ ತಲೆಗೆ ರಕ್ತದ ಪೂರೈಕೆ ಸಮರ್ಪಕವಾಗಿ ಆಗುವಂತೆ ಪಂಪ್‌ ಅನ್ನು ಬಳಸಲಾಯಿತು. ಈ ಮೂಲಕ ಶಸ್ತ್ರಚಿಕಿತ್ಸೆ ವೇಳೆ ಮೆದುಳಿನ ಅಂಗಾಂಶಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಯಿತು. ಪರಿಣಾಮ, ಶಸ್ತ್ರಚಿಕಿತ್ಸೆ ಮುಗಿದ ಬಳಿಕವೂ ದಾನಿಯ ತಲೆಯು ಅಲ್ಲಾಡುತ್ತಿತ್ತು ಎಂದಿದ್ದಾರೆ ವಿಜ್ಞಾನಿಗಳು.

36 ಗಂಟೆ ಬದುಕಿತು: ಶಸ್ತ್ರಚಿಕಿತ್ಸೆ ಬಳಿಕ ಎರಡು ತಲೆಯ ಇಲಿಯು 36 ಗಂಟೆಗಳ ಕಾಲ ಬದುಕುಳಿಯಿತು. ಆದರೆ, ದೀರ್ಘ‌ಕಾಲ ಉಳಿಯುವಂತೆ ಮಾಡಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ವಿಶ್ವಾಸ.

ಸದ್ಯದಲ್ಲೇ ಜೀವಂತ ತಲೆ ಕಸಿ: ಮೊದಲ ಬಾರಿಗೆ ಜೀವಂತ ತಲೆ ಕಸಿ ಮಾಡಲು ಹೊರಟ ಡಾ| ಕ್ಯಾನವೆರೋ ಅವರನ್ನು ನಿಂದಿಸಿದವರೇ ಹೆಚ್ಚು. ಈಗ ಅವರು ವೆಲೆರಿ ಸ್ಪಿರಿಡೊನೋವ್‌ ಎಂಬ ವ್ಯಕ್ತಿಯೊಬ್ಬರಿಗೆ ತಲೆ ಕಸಿ ಮಾಡಲು ಮುಂದಾಗಿದ್ದಾರೆ. ದೈಹಿಕ ಶಕ್ತಿಯನ್ನು ಕಳೆದುಕೊಂಡು, ಹಲವು ವರ್ಷಗಳಿಂದ ವೀಲ್‌ಚೇರ್‌ನಲ್ಲೇ ಕಾಲ ಕಳೆಯುತ್ತಿರುವ ವೆಲೆರಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಅವರ ದೇಹವನ್ನು ಮೊದಲು ಘನೀಭವಿಸಿ (ಫ್ರೀಜ್‌), ಕುತ್ತಿಗೆ ಮತ್ತು ಬೆನ್ನುಹುರಿಯನ್ನು ಕತ್ತರಿಸಲಾಗುತ್ತದೆ. ಅನಂತರ ಅವರ ತಲೆಯನ್ನು ದಾನಿಯ ದೇಹಕ್ಕೆ ಅಳವಡಿಸಲಾಗುತ್ತದೆ. ಅಚ್ಚರಿಯೆಂದರೆ, ವೆಲೆರಿ ತಲೆಯನ್ನು ಮತ್ತೂಂದು ದೇಹಕ್ಕೆ ಕೂರಿಸಲು ವಿಶೇಷ ರೀತಿಯ ಅಂಟು (ಗಮ್‌) ಬಳಸಲಾಗು ತ್ತದೆ. ಇದು ಯಶಸ್ವಿಯಾದರೆ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಲಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next