Advertisement

ಸೋಲಿನ ಬಳಿಕದ ಗೆಲುವಿನಿಂದ ಅನುಭವ

11:18 AM Aug 31, 2017 | |

ಕಲಬುರಗಿ: ಮೊದಲ ಸೋಲಿನ ಬಳಿಕ ನಡೆಯುವ ಗೆಲುವಿನ ಪ್ರಯತ್ನಗಳಿಂದ ಮನುಷ್ಯ ಸಾಕಷ್ಟು ಅನುಭವ ಪಡೆಯುತ್ತಾನೆ. ಇದರಿಂದ ಆತ ಮುಂದೆ ಖಂಡಿತವಾಗಿ ಗೆಲುವಿನೊಂದಿಗೆ ಜೀವನ ನಡೆಸುತ್ತಾನೆ. ಆದ್ದರಿಂದ ಸೋಲೆ
ಗೆಲುವಿನ ಸೋಪಾನವೆಂದು ಶ್ರೀಶೈಲ ಜಗದ್ಗುರು ಡಾ| ಸಾರಂಗಧರ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡ ಗಣೇಶ ಉತ್ಸವ ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ
ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿ ಅವರು ಆಶೀರ್ವಚನ ನೀಡಿದರು.

ಯಾವುದೇ ಸ್ಪರ್ಧೆಯಿರಲಿ ಮೊದಲ ಬಾರಿ ಗೆದ್ದರೆ ತೃಪ್ತಿ ಆಗಬಹುದು. ಆದರೆ ಸೋಲು ಎದುರಿಸಿದವನೆ ಮತ್ತೆ
ಗೆಲ್ಲಲು ಪ್ರಯತ್ನಿಸುತ್ತಾನೆ. ಇದರಿಂದ ಆತನಿಗೆಯೇ ಅನುಭವ ಹೆಚ್ಚು ಎಂದರು. ಓಟದ ಸ್ಪರ್ಧೆ, ಹಗ್ಗದ ಆಟ, ಕೇರಂ, ಬಿಂದಿಯಾ, ರಂಗೋಲಿ, ಬ್ಯಾಂಗಲ್‌ ಗೇಮ್‌, ಗ್ಲಾಸ್‌ ಆ್ಯಂಡ್‌ ಟೂತ್‌ ಪಿಕ್‌, ಮೇಕಪ್‌ ಗೇಟ್‌ ರೆಡಿ, ಬಾಲ್‌ಗೇಮ್‌, ಮಾರ್ಬಲ್‌ ಗೇಮ್‌, ಕುರ್ಚಿ ಆಟ, ನೃತ್ಯ, ವಚನ ಪಠಣ, ವಚನ ಗಾಯನ ಹೀಗೆ ಹಲವಾರು ಸ್ಪರ್ಧೆಗಳು ನಡೆದವು.

ರೇಖಾ ಅಂಡಗಿ, ಪ್ರಿಯಾ ನಾಗಶೆಟ್ಟಿ, ಪದ್ಮಾ ಆಂಧೋಲಾ, ಮಧು ಹಿಂದೊಡ್ಡಿ, ನಾಗರತ್ನ ಮುಗಳಿ, ಸ್ನೇಹಾ ಗೋಣಿ, ಅರುಣಾ ಸಂಗಶೆಟ್ಟಿ, ಅಶ್ವಿ‌ನಿ ಬೊಮ್ಮಾ, ರಾಜೇಶ್ವರಿ ಕಂಟಿ, ಮಾಧವಿ ಪಾಟೀಲ, ಜ್ಯೋತಿ ಆವಂಟಿ, ವಿಜಯಲಕ್ಷ್ಮೀ ರಟಕಲ್‌, ರೇಣುಕಾ ಸಿ. ತಾರಾ ಪಾಟೀಲ, ಮಹಾದೇವಿ ಪಾಟೀಲ, ದೀಪಾ ಪಾಟೀಲ, ರತ್ನಮ್ಮಾ ನಿಂಬೂರ್‌ ಪ್ರಥಮ, ದ್ವಿತೀಯ ಬಹುಮಾನ ಪಡೆದುಕೊಂಡರು.

ಉಳಿದ 45 ಮಕ್ಕಳಿಗೆ ಕಾಲೋನಿ ಹಿರಿಯರಾದ ಉಮೇಶ ಶೆಟ್ಟಿ, ವಿಶ್ವನಾಥ ರಟಕಲ್‌, ಬಸವಂತರಾವ್‌ ಜಾಬಶೆಟ್ಟಿ, ನಾಗಭೂಷಣ ಹಿಂದೊಡ್ಡಿ, ಮಲ್ಲಿಕಾರ್ಜುನ ನಾಗಶೆಟ್ಟಿ, ನಾಗರಾಜ ಹೆಬ್ಟಾಳ, ಶಿವಪುತ್ರಪ್ಪ ದಂಡೋತಿ, ಶಾಂತಯ್ಯ ಬೀದಿಮನಿ, ಉದಯಕುಮಾರ ಪಡಶೆಟ್ಟಿ, ವೀರಣ್ಣ ಹುಮನಾಬಾದ ಅವರಿಂದ ಬಹುಮಾನ ವಿತರಿಸಲಾಯಿತು.

Advertisement

ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ, ವೀರೇಶ ನಾಗಶೆಟ್ಟಿ ಹಾಜರಿದ್ದರು. ಕರಣ ಆಂದೋಲಾ
ನಿರೂಪಿಸಿದರು. ಕು| ಪೂರ್ವಿ ಹುಮನಾಬಾದ ಭರತನಾಟ್ಯ ಪ್ರದರ್ಶಿಸಿದಳು. ಮಾಧವಿ ಪಾಟೀಲ ಪ್ರಾರ್ಥನಾ ಗೀತೆ ಹಾಡಿದಳು.

ಪಂಚಮಿ ದಿವಟಗಿ, ರೇಣುಕಾ ಬಿರಾದಾರ, ಶಾಂತಾ ಸಿಕ್ಕೇದ, ಕಮಲಾಬಾಯಿ ಬೀದಿಮನಿ, ಲಲಿತಾ ಸಂಗೋಳಗಿ, ಸುರೇಖಾ ಯಾದಗಿರಿ, ಶ್ರೀದೇವಿ ತಂಬಾಕೆ, ಸುಮಂಗಲಾ ನಾಗಶೆಟ್ಟಿ, ಉಮಾ ಹೆಬ್ಟಾಳ, ಶಶಿಕಲಾ ಹಿಂದೊಡ್ಡಿ, ವಿಜಯಶ್ರೀ ಹೆಬ್ಟಾಳ, ಲತಾ ಪುಣ್ಯಶೆಟ್ಟಿ, ಸುಮಿತ್ರಾ ರಾಜಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next