Advertisement

ಅನುಭವ ಮಂಟಪ ಉತ್ಸವ ಇಂದಿನಿಂದ

10:30 AM Nov 25, 2018 | Team Udayavani |

ಬಸವಕಲ್ಯಾಣ: ವಿಶ್ವಧರ್ಮ ಟ್ರಸ್ಟ್‌, ಅನುಭವ ಮಂಟಪ ನ.25 ಹಾಗೂ 26ರಂದು ಹಮ್ಮಿಕೊಂಡಿರುವ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕಾಗಿ ಅನುಭವ ಮಂಟಪದ ಆವರಣದಲ್ಲಿ ಬೃಹತ್‌ ಮಂಟಪ ಸಿದ್ಧಗೊಂಡಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಅಚ್ಚು ಕಟ್ಟಾಗಿ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆ 60 ಅಡಿ ಹಾಗೂ 100-200 ಅಡಿ ಅಳತೆಯ ಪೆಂಡಾಲ್‌ ಸಿದ್ಧಗೊಳಿಸಲಾಗಿದೆ.

Advertisement

ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಉತ್ಸವದಲ್ಲಿ ಹೆಚ್ಚು ಶರಣ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿಂದ ಮಂಟಪದಲ್ಲಿ ಸುಮಾರು 20ರಿಂದ 25 ಸಾವಿರ ಆಸನಗಳನ್ನು ಹಾಕಲಾಗಿದೆ.

ಶರಣ ಕಮ್ಮಟ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಆವರಣದಲ್ಲಿ ಉಳಿಸುಕೊಳ್ಳಲು ವಸತಿ, ಪ್ರಸಾದ ವ್ಯವಸ್ಥೆ ಮತ್ತು ಕುಡಿಯುವ ನೀರು ಸೇರಿದಂತೆ ಪ್ರತಿಯೊಂದು ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮ ನಿಮಿತ್ತ ಆವರಣವನ್ನು ಮನೆ ಅಂಗಳಂತೆ ಶುಚಿಗೊಳಿಸಿ, ಮೂಲ ಅನುಭವ ಮಂಟಪಕ್ಕೆ ಬಣ್ಣ ಬಳಿದು, ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಶರಣ, ಶರಣೆಯರ ಸಂದೇಶಗಳು ಇರುವ ನಾಮಫಲಕಗಳನ್ನು ಅಳವಡಿಸಲಾಗಿದೆ.

ಒಟ್ಟಾರೆ ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ನಿಮಿತ್ತ ಅನುಭವ ಮಂಟಪ ಆವರಣ ಹಾಗೂ ಬಸವಕಲ್ಯಾಣ ನಗರದಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಂದು ಉದ್ಘಾಟನೆ: 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ಹಾಗೂ ಶರಣಧಾಮ ಲೋಕಾರ್ಪಣೆ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು ನೇತೃತ್ವ ವಹಿಸುವರು.

Advertisement

ಸಚಿವ ರಾಜಶೇಖರ ಪಾಟೀಲ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್‌ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ, ಸಂಸದ ಭಗವಂತ ಖೂಬಾ, ಭಾಲ್ಕಿ ಶಾಸಕ ಈಶ್ವರ್‌ ಖಂಡ್ರೆ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೆಲ್ಕೂರ ಹಾಗೂ ಎಂ.ಡಿ.ಲಕ್ಷ್ಮೀ ನಾರಾಯಣ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ “ಎಮ್ಮವರಿಗೆ ಸಾವಿಲ್ಲ’ ಗೋಷ್ಠಿ-01 ನಡೆಯಲಿದೆ. ಸಂಜೆ 6 ಗಂಟೆಗೆ ವಚನ ಭಜನೆ ಸ್ಪರ್ಧೆ ಜರುಗಲಿದೆ.

ಬಸವಕಲ್ಯಾಣ ಐತಿಹಾಸಿಕ ಭೂಮಿ. ಇಂತಹ ಭೂಮಿಯಲ್ಲಿ ಜನ್ಮತಾಳಿದ ನಾವೇಲ್ಲರೂ ಪುಣ್ಯರು. ಹಾಗಾಗಿ ನಮ್ಮ ಜನ್ಮ ಸಾರ್ಥಕ ವಾಗಬೇಕಾದರೆ, ವಿಶ್ವಗುರು ಬಸವಣ್ಣನವರ ವಿಚಾರ ಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಆದ್ದರಿಂದ ಅನುಭವ ಮಂಟಪ ಆವರಣದಲ್ಲಿ ನಡೆಯುವ ಉತ್ಸವ ಕಾರ್ಯಕ್ರಮದಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. 
 ಶ್ರೀ ಗುರು ಬಸವ ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ

ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ. ಹಾಗಾಗಿ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಅಂತಾರಾಷ್ಟ್ರೀಯ ಮಟ್ಟದ ಉತ್ಸವ ಆಗಬೇಕು. ಹಾಗಾಗಿ ಜಾತಿ, ಲಿಂಗ, ವರ್ಣ ಮರೆತು ಶರಣ ಭಕ್ತಾದಿಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು. 
 ಡಾ| ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ

Advertisement

Udayavani is now on Telegram. Click here to join our channel and stay updated with the latest news.

Next