Advertisement

“ಅನುಭೂತಿ’ಯಲ್ಲಿ ಪಡೆಯಿರಿ ಅನುಭವ

11:41 AM Jan 12, 2018 | |

ಚೆನ್ನೈನಿಂದ ಬೆಂಗಳೂರು ಮೂಲಕ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಗುರುವಾರದಿಂದ ಅನುಭೂತಿ ಕೋಚ್‌ ಅನ್ನು ಜೋಡಿಸಲಾಗಿದೆ. ಪ್ರಯಾಣಿಕರಿಗೆ ಸಂಕ್ರಾತಿಯ ಕೊಡುಗೆ ಇದು ಎಂದು ದಕ್ಷಿಣ ರೈಲ್ವೆ ಹೇಳಿಕೊಂಡಿದೆ. ವಿಮಾನದಲ್ಲಿ ಇರುವಂಥ ವೈಭವೋಪೇತ ವ್ಯವಸ್ಥೆಗಳನ್ನು ರೈಲುಗಳಲ್ಲಿಯೂ ಒದಗಿಸುವ ಪ್ರಯತ್ನವಾಗಿ ಭಾರತೀಯ ರೈಲ್ವೆ ಈ ವ್ಯವಸ್ಥೆ ಜಾರಿ ಮಾಡಿದೆ.

Advertisement

ಏನು ವಿಶೇಷತೆಗಳು
-ಬೋಗಿಯಲ್ಲಿ ಸುಧಾರಣೆಗೊಂಡ ಒಳಾಂಗಣ ವಿನ್ಯಾಸ, ಸೀಟ್‌ಗಳು, ಎಲ್‌ಸಿಡಿ ಸ್ಕ್ರೀನ್‌ಗಳು.
-ಅತ್ಯಾಧುನಿಕ ಶೌಚಾಲಯಗಳು ಹ್ಯಾಂಡ್ಸ್‌ ಫ್ರೀ.
-ಬೋಗಿಯ ಗೋಡೆಗಳಲ್ಲಿ ಭಿತ್ತಿಪತ್ರ ಅಂಟಿಸದಂತೆ ವ್ಯವಸ್ಥೆ.
-ಆರಾಮವಾಗಿ ಕಾಲುಗಳನ್ನು ಇರಿಸಲು ವ್ಯವಸ್ಥೆ.
-ಶೇ.20-25 ಪ್ರಥಮ ದರ್ಜೆ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಟಿಕೆಟ್‌ ದರ ಇಷ್ಟು ಹೆಚ್ಚು.
-30-35 ಲಕ್ಷ ರೂ.ರೈಲ್ವೆ ಇಲಾಖೆ ಬೋಗಿಗಾಗಿ ಮಾಡಿದ ಹೆಚ್ಚುವರಿ ವೆಚ್ಚ.
-2.5 ಕೋಟಿ ರೂ. ಹೆಚ್ಚಿನ ವಿನ್ಯಾಸವಿಲ್ಲದೆ ಸಾಮಾನ್ಯವಾಗಿ ನಿರ್ಮಾಣ ಮಾಡುವ ಬೋಗಿಗೆ ತಗಲುವ ವೆಚ್ಚ.
-56 ಒಂದು ಬೋಗಿಯಲ್ಲಿ ಕೂರಬಹುದಾದ ಪ್ರಯಾಣಿಕರು.
-22007 ಮತ್ತು 22008- ಚೆನ್ನೈ-ಮೈಸೂರು ಪ್ರಯಾಣಿಕರು ಸೀಟು ಕಾಯ್ದಿರಿಸಲು ಆಯ್ಕೆ ಮಾಡಬೇಕಾದ ಬೋಗಿಗಳ ಸಂಖ್ಯೆ.

ಆಯ್ದ ರೂಟ್‌ಗಳು: ನವದೆಹಲಿಯಿಂದ ಚಂಡೀಗಡ, ಲಕ್ನೋ, ಅಮೃತಸರ, ಜೈಪುರಕ್ಕೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ಗಳಲ್ಲಿ ಈ ಕೋಚ್‌ ಜೋಡಣೆ.

Advertisement

Udayavani is now on Telegram. Click here to join our channel and stay updated with the latest news.

Next