ಹೊಸದಿಲ್ಲಿ: ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಭಾರತ ತಂಡದಲ್ಲಿ ಅನುಭವ ಮತ್ತು ಸಾಮರ್ಥ್ಯವಿದೆ. ಆದರೆ ಸರಿಯಾದ ಸಂದರ್ಭದಲ್ಲಿ ಕ್ಲಿಕ್ ಆಗಬೇಕು ಎಂದು ಭಾರತದ ಮಾಜಿ ಆಲ್ ರೌಂಡರ್ ಮೊಹಿಂದರ್ ಅಮರ್‌ನಾಥ್ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 5ರಂದು ಭಾರತ ಸೌತಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಕೂಟವನ್ನು ಆರಂಭಿಸಲಿದೆ.
‘ನಮ್ಮ ತಂಡಕ್ಕೆ ಸಾಮರ್ಥ್ಯವಿದೆ. ಉತ್ತಮ ಆಟಗಾರರಿದ್ದಾರೆ ಮತ್ತು ಅನುಭವ ಕೂಡ ಇದೆ. ಆದರೆ ಆಟಗಾರು ಸರಿಯಾದ ಸಮಯದಲ್ಲಿ ಕ್ಲಿಕ್ ಆಗಬೇಕು ಅಷ್ಟೇ. ಇಲ್ಲಿಯವರೆಗೆ ಯಾವುದೇ ಪಂದ್ಯಗಳನ್ನಾಡಿರಲಿ ಅವೆಲ್ಲವೂ ಮುಗಿದಿರುವ ಅಧ್ಯಾಯ. ವಿಶ್ವಕಪ್ ಹೊಸತನದಿಂದ ಕೂಡಿದೆ. ಪಂದ್ಯಗಳು ಹೊಸದು. ಈ ಕೂಟ ಹೊಸ ಆಟದಂತೆ. ಇದಕ್ಕೆ ನೂತನ ತಯಾರಿಯ ಅಗತ್ಯವಿದೆ’ ಎಂದರು.
ಬುಮ್ರಾ ಅದ್ಭುತ ಬೌಲರ್
‘ಬುಮ್ರಾ ಅದ್ಭುತ ಬೌಲರ್. ಬೌಲಿಂಗ್‌ನಲ್ಲಿ ಅವರು ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಭಾರತದ ದೃಷ್ಟಿಕೋನದಲ್ಲಿ ಬುಮ್ರಾ ಬಹಳ ಮುಖ್ಯ ವಾದ ಬೌಲರ್ ಎಂದು ನನಗನಿಸುತ್ತದೆ. ಕೂಟದುದ್ದಕ್ಕೂ ಅವರು ಫಿಟ್ ಆಗಿರಬೇಕು ಮತ್ತು ಭಾರತದ ಆಟದಲ್ಲಿ ವ್ಯತ್ಯಾಸ ಉಂಟುಮಾಡುವುದರಲ್ಲಿ ಸಂಶಯವುಲ್ಲ. ಲೈನ್ ಮತ್ತು ಲೆಂಥ್ ವಿಷಯದಲ್ಲಿ ಬುಮ್ರಾ ಸ್ಥಿರವಾಗಿದ್ದಾರೆ’ ಎಂದು ಹೇಳಿದ್ದಾರೆ.