Advertisement
ಕೊತ್ತಂಬರಿ ಸೊಪ್ಪು, ಬೀನ್ಸ್ , ಟೊಮ್ಯಾಟೊ, ಈರುಳ್ಳಿ ಸೇರಿದಂತೆ ಮತ್ತಿ ತರರತರಕಾರಿ ದರಗಳು ಗ್ರಾಹಕರ ಕೈ ಸುಡುತ್ತಿವೆ. ಸೋಮವಾರ ಯಶವಂತಪುರದ ಎಪಿ ಎಂಸಿ ಯಲ್ಲಿ ಮತ್ತು ಕೆ.ಆರ್.ಮಾರುಕಟ್ಟೆಯಲ್ಲಿ ಕೊತ್ತಂ ಬರಿ ಸೊಪ್ಪು ಪ್ರತಿ ಕಟ್ಟು 50ರಿಂದ 60ರೂ. ವರೆಗೂ ಮಾರಾಟವಾಯಿತು. ಯಶವಂತಪುರ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಟ್ಟು ಕೆ.ಜಿಗೆ 200ರೂ.ಗೆ ಖರೀದಿಯಾಯಿತು.
Related Articles
Advertisement
ಆದರೆ ಕಳೆದ ಒಂದುವಾರದ ಹಿಂದೆ ಮತ್ತೆ ಟೊಮ್ಯಾಟೊ ಬೆಲೆ ಕೆ.ಜಿಗೆ 30 ರಿಂದ 40 ರೂ. ಗೆ ಖರೀದಿಯಾಗಿತ್ತು. ಇದೀಗ ಆ ಬೆಲೆ 40 ರಿಂದ 45 ರೂಪಾಯಿಗೆ ಜಿಗಿದಿದೆ ಎಂದು ಕಲಾಸಿಪಾಳ್ಯ ತರಕಾರಿ ವರ್ತಕರು ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಮಾಹಿತಿ ನೀಡಿದ್ದಾರೆ.
ದುಪ್ಪಟ್ಟು ಬೆಲೆಗಳಲ್ಲಿ ಮಾರಾಟ: ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷರಂಗಸ್ವಾಮಿ ತರಕಾರಿ, ಟೊಮಾಟೊ, ಈರುಳ್ಳಿ ಸೇರಿದಂತೆ ಇನ್ನಿತರಅಗತ್ಯ ವಸ್ತುಗಳನ್ನುಬೀದಿಬದಿ ವ್ಯಾಪಾರಿಗಳು ಮಧ್ಯವರ್ತಿಗಳಿಂದ ಖರೀದಿ ಮಾಡುತ್ತಾರೆ. ಮಧ್ಯವರ್ತಿಗಳು ಹೋಲ್‌ಸೇಲ್ ವ್ಯಾಪಾರಿಗಳಿಂದ ಖರೀದಿಸಿ ಅದರಲ್ಲಿ ತಮ್ಮ ಲಾಭ ಇಟ್ಟುಕೊಂಡು ಇತರ ವ್ಯಾಪಾರಿಗಳಿಗೆ ಮಾಡುತ್ತಾರೆ. ಆಗ ಮಾರಾಟಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಸಾಗಾಣಿಕೆ ವೆಚ್ಚ, ಕೂಲಿ ಸೇರಿಸಿದರೆ ವ್ಯಾಪಾರಿಗಳಿಗೆ ಉಳಿಯುವುದು ಕೆ.ಜಿಗೆ 3ರಿಂದ 5 ರೂ.ಅಷ್ಟೇ ಉಳಿಯುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಈರುಳ್ಳಿ ಬೆಲೆ ಕ್ವಿಂಟಲ್‌ಗೆ 3100 ರೂ. :
ಸೋಮವಾರ ಯಶವಂತಪುರ ಮಾರುಕಟ್ಟೆಗೆ 31,555 ಬ್ಯಾಗ್ ಮತ್ತು ದಾಸನಪುರ ಮಾರುಕಟ್ಟೆಗೆ 27,327 ಬ್ಯಾಗ್ ಈರುಳ್ಳಿ ಪೂರೆಕೆ ಆಗಿದೆ. ಮಹಾರಾಷ್ಟ್ರದಿಂದ 40 ಟ್ರಕ್ ಹಳೆ ದಾಸ್ತಾನು ಈರುಳ್ಳಿ ಸರಬರಾಜಾಗಿದೆ ಎಂದು ಯಶವಂತಪುರ ಈರುಳ್ಳಿ ಮಾರಾಟ ವರ್ತಕರು ಹೇಳಿದ್ದಾರೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 3100 ರಿಂದ 3300 ರೂ.ಗೆ ಖರೀದಿ ಆಯಿತು. ಜತೆಗೆ ದೊಡ್ಡಗಾತ್ರದ ಈರುಳ್ಳಿ 2900 ರಿಂದ 3000 ರೂ.ಗೆ ಮಾರಾಟವಾಯಿತು. ಬಿಸ್ಕೆಟ್ ಬಣ್ಣದ ಈರುಳ್ಳಿ ಪ್ರತಿ ಕ್ವಿಂಟಲ್ 1500 ದಿಂದ 2200ರೂ ಗೆ ಮಾರಾಟವಾಯಿತು ಎಂದು ಯಶವಂತಪುರು ಎಪಿಎಂಸಿಯ ಈರುಳ್ಳಿ ವರ್ತಕ ಉದಯಶಂಕರ್ ಮಾಹಿತಿ ನೀಡಿದ್ದಾರೆ.