Advertisement
ಕಲ್ಕತ್ತಾ ಎಲೆಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ಪೂರೈಕೆಯ ಕೊರತೆ ಎದುರಾಗಿದೆ. ಈ ಹಿಂದೆ 2-3 ರೂ.ಗೆ ಒಂದು ಎಲೆ ಸಿಗುತ್ತಿತ್ತು. ಇದೀಗ 10-15 ರೂ. ಆಗಿದೆ. ಇದರಿಂದಾಗಿ ಸಹಜವಾಗಿ ಪಾನ್ ಗಳ ಬೆಲೆಯೂ 5ರಿಂದ 8 ರೂ. ವರೆಗೆ ಹೆಚ್ಚಾಗಿದೆ. ಮೇ ವೇಳೆ ಸುರಿದ ಅಪಾರ ಮಳೆಯಿಂದಾಗಿ ಎಲೆತೋಟಗಳೇ ಕೊಚ್ಚಿಕೊಂಡು ಹೋಗಿದ್ದು, ಅಳಿದುಳಿದ ಎಲೆ ಬೆಳೆಗೆ ರೋಗ ಕಾಣಿಸಿಕೊಂಡಿದ್ದರಿಂದ ಕಲ್ಕತ್ತಾ ಎಲೆಗಳ ಫಸಲು ನಿರೀಕ್ಷಿತವಾಗಿ ಇಲ್ಲವಾಗಿದೆ.
Related Articles
Advertisement
ಡ್ಯಾಮೇಜ್ ಎಲೆಗಳು : ಈ ಹಿಂದೆ ರೈಲ್ವೆ ಮೂಲಕ ಕಲ್ಕತ್ತಾ ಎಲೆಗಳು ಆಗಮಿಸುತ್ತಿದ್ದವು. ರೈಲು ಸಂಪರ್ಕ ಸರಿಯಾಗಿ ಇರದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆಆಗಮಿಸಿ ಅಲ್ಲಿಂದ ಟ್ರಾನ್ಸ್‌ಪೋರ್ಟ್ ಮೂಲಕ ನಗರಕ್ಕೆ ಆಗಮಿಸುತ್ತಿವೆ. ಬರುವ ಎಲೆಗಳು ಡ್ಯಾಮೇಜ್ ಆಗಿರುತ್ತವೆ. ಅದೆಲ್ಲವನ್ನು ತೆಗೆದು ಎಲೆಗಳ ಮಾರಾಟ ಮಾಡಬೇಕಾಗಿದೆ. ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದು ಹಲವು ವ್ಯಾಪಾರಿಗಳ ಅಳಲು.
ಕಳೆದ ಬಾರಿ ಆದ ಪ್ರವಾಹದಿಂದ ಇಡೀ ಎಲೆ ತೋಟಗಳು ಕೊಚ್ಚಿಕೊಂಡು ಹೋಗಿದ್ದು, ಬೆಲೆ ಏರಿಕೆಯಾಗಿದೆ. ಎಲೆಗಳ ಸರಬರಾಜು ಸಹ ಆಗುತ್ತಿಲ್ಲ, ಬರುವ ಎಲೆಗಳಲ್ಲೂ ಡ್ಯಾಮೇಜ್ ಬರುತ್ತಿದ್ದು ಎಲ್ಲವನ್ನು ಸರಿಪಡಿಸಿಕೊಂಡು ಪಾನ್ ಶಾಪ್‌ಗಳಿಗೆ ನೀಡಿದರಾಯಿತು ಎನ್ನುವಷ್ಟರಲ್ಲಿಯೇ ಬೆಲೆ ಏರಿಕೆಯಿಂದ ಪಾನ್ ಶಾಪ್ ಮಳಿಗೆಯವರು ಎಲೆಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಇಳಿಕೆ ಯಾವಾಗ ಎನ್ನುವ ಚಿಂತೆ ಕಾಡುತ್ತಿದೆ. – ವಾಯಿದ್ ಶೇಖ್, ಕಲ್ಕತ್ತಾ ಎಲೆ ಸರಬರಾಜುದಾರ
ಕಲ್ಕತ್ತಾ ಪಾನ್ ತಿನ್ನಲೆಂದು ನಮ್ಮ ಅಂಗಡಿಗೆ ಬರುತ್ತಾರೆ. ಆದರೆ ಎಲೆಗಳ ಅಭಾವದಿಂದ ಜನರನ್ನು ಮರಳಿ ಕಳುಹಿಸುವಂತಾಗಿದೆ. ಬೆಲೆ ಏರಿಕೆ ಬಿಸಿ ಸಹ ತಟ್ಟಿದ್ದು, ಬೇಕಾದಷ್ಟು ಎಲೆಗಳ ಸರಬರಾಜು ಆಗುತ್ತಿಲ್ಲ. ಲಾಕ್ ಡೌನ್ ಮುನ್ನ 1 ಸಾವಿರಕ್ಕೂ ಹೆಚ್ಚು ಕಲ್ಕತ್ತಾ ಎಲೆ ಖರೀದಿ ಮಾಡಲಾಗುತ್ತಿತ್ತು. ಇದೀಗ 600 ಎಲೆ ಖರೀದಿ ಮಾಡಲಾಗುತ್ತಿದೆ. ಪಾನ್‌ಗಳ ದರವನ್ನೂ ಏರಿಕೆ ಮಾಡಲಾಗಿದೆ. –ಆರೂಣ ರಶೀದ್, ಪೀರಾ ಪಾನ್ ಶಾಪ್ ಮಾಲೀಕ
-ಬಸವರಾಜ ಹೂಗಾರ