Advertisement

ದುಬಾರಿ, ಕಳಪೆ ರಸಗೊಬ್ಬರ: ಕ್ರಮ ಕೈಗೊಳ್ಳಲು ಶಾಸಕ ಕೆ. ಮಹದೇವ್ ಸೂಚನೆ

10:01 PM May 16, 2022 | Team Udayavani |

ಪಿರಿಯಾಪಟ್ಟಣ : ತಂಬಾಕು ಮಂಡಳಿಯಿಂದ ನೀಡಲಾಗುವ ರಸಗೊಬ್ಬರವು ಕಳಪೆ ಹಾಗೂ ದುಬಾರಿ ಬೆಲೆಯದ್ದಾಗಿದೆ ಎಂದು ರೈತರು ಆರೋಪ ಮಾಡಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಾಗೂ ವರದಿ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಕೆ. ಮಹದೇವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

Advertisement

ಈ ಬಗ್ಗೆ ಪತ್ರಿಕಾ ಮಾತನಾಡಿರುವ ಅವರು ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಸಸಿಯನ್ನು ನಾಟಿ ಮಾಡಲಾಗಿದ್ದು ಈ ತಂಬಾಕು ಸಸಿಗಳ ಬೆಳವಣಿಗೆಗೆ ಅಗತ್ಯವಿರುವ ರಸಗೊಬ್ಬರ ಬೇಕಾಗಿದ್ದು ಆದರೆ ತಂಬಾಕು ಮಂಡಳಿಯು ರೈತರಿಗೆ ಕಳಪೆ ಗುಣಮಟ್ಟದ ಗೊಬ್ಬರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ದೂರುಗಳು ಬರುತ್ತಿದ್ದು ಅದೇ ರೀತಿ ಈ ವರ್ಷದಲ್ಲಿ ಕಳೆದ ವರ್ಷಕ್ಕಿಂತಲೂ ಸುಮಾರು ಶೇಕಡಾ 40 ರಷ್ಟು ರಸಗೊಬ್ಬರದ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಕೇಂದ್ರ ಸರ್ಕಾರ ಶೀಘ್ರವೇ ರೈತರಿಗೆ ರಸಗೊಬ್ಬರದ ಬೆಲೆಯನ್ನು ಕಡಿಮೆ ಮಾಡಿ ಅವರಿಗೆ ಸಬ್ಸಿಡಿ ರೂಪದಲ್ಲಿ ರಸಗೊಬ್ಬರ ನೀಡಬೇಕು ಎಂದಿದ್ದಾರೆ.

ತಾಲೂಕಿನಾದ್ಯಂತ ಉತ್ತಮ ಮುಂಗಾರು ಮಳೆಯಾಗುತ್ತಿದ್ದು ಈ ವರ್ಷ ಯಾವುದೇ ರಸಗೊಬ್ಬರಕ್ಕೆ ಕೊರತೆ ಇರುವುದಿಲ್ಲ ತಾಲೂಕಿನ ಅಗತ್ಯತೆಗಿಂತ ತಕ್ಕಂತೆ ವಿವಿಧ ರಸಗೊಬ್ಬರಗಳು ಮತ್ತು ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಎಲ್ಲಾ ವಿಧವಾದ ಗೊಬ್ಬರಗಳು ಬೇಡಿಕೆಗನುಗುಣವಾಗಿ ಲಭ್ಯವಿದ್ದು, ಸರಬರಾಜು ಸಂಸ್ಥೆಗಳಿಂದ ಹೆಚ್ಚಿನ ದಾಸ್ತಾನನ್ನು ಪಡೆಯಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ಅದೇ ರೀತಿ ಕೃಷಿ ಇಲಾಖೆಯಿಂದ ಈಗಾಗಲೇ ಬಿತ್ತನೆ ಬೀಜ ಸಾವಯವ ಗೊಬ್ಬರ, ಕೀಟನಾಶಕ ಹಾಗೂ ಲಘು ಪೋಷಕಾಂಶಗಳು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು.

ತಂತ್ರಾಂಶದಲ್ಲಿ ಬೆಳೆ ಸಮೀಕ್ಷೆ

Advertisement

ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್ ನೀಡಿರುವ ಹೇಳೀಕೆಯಲ್ಲಿ ತಾಲ್ಲೂಕಿನ ರೈತರು ತಾವು ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಮತ್ತು ತಮ್ಮ ಮೊಬೈಲ್ ಗಳ ಮೂಲಕ ಬೆಳೆ ಬಿತ್ತಿದ ಮೂವತ್ತು ದಿನದೊಳಗೆ ದಾಖಲಿಸಬೇಕು ಇದರಿಂದ ರೈತರು ಬೆಳೆದ ಬೆಳೆ ನಷ್ಟ ಬೆಳೆ ವಿಮೆ ಬೆಳೆ ಪರಿಹಾರ ಹಾಗೂ ಬೆಳೆಗಳ ಅವಲಂಬಿತ ಸಾಲ ಪಡೆಯಲು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅದೇ ರೀತಿ ತಮ್ಮ ಪಹಣಿಗಳಲ್ಲಿ ಬೆಳೆ ನಮೂದಿಸಲು ಅನುಕೂಲವಾಗಲಿದ್ದು ಪ್ರತಿಯೊಬ್ಬ ರೈತರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next