Advertisement

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದುಬಾರಿ ವೆಚ್ಚ: ತನಿಖೆ ?

11:29 PM Jul 11, 2023 | Team Udayavani |

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ದುಬಾರಿ ವೆಚ್ಚ ಆಗಿರುವ ಬಗ್ಗೆ ಪರಿಶೀಲಿಸಿದ ಬಳಿಕ ತನಿಖೆ ನಡೆಸುವ ಕುರಿತು ಚಿಂತಿಸಲಾಗುವುದು ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ವಿಧಾನಪರಿಷತ್‌ನಲ್ಲಿ ಹೇಳಿದರು.

Advertisement

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ದುಬಾರಿ ವೆಚ್ಚವಾಗಿದೆ. ಯೋಜನ ವೆಚ್ಚ ಮೂರು ಬಾರಿ ಪರಿಷ್ಕೃರಿಸಲಾಗಿದೆ. ಕಲಬುರಗಿಯಲ್ಲಿ 200 ಕೋಟಿ ರೂ., ವಿಜಯಪುರದಲ್ಲಿ 340 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಸಾಧ್ಯವಾಗಿದ್ದರೆ, ಶಿವಮೊಗ್ಗದಲ್ಲಿ ಯಾಕಿಲ್ಲ. ರನ್‌ವೇ ನಿರ್ಮಾಣಕ್ಕೆ 400 ಕೋಟಿ ರೂ. ಯಾಕೆ? ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಲಬುರಗಿ ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಹೋಲಿಕೆ ಸರಿಯಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ರನ್‌ವೇ ಇದ್ದು, ಇದೊಂದು ಕಮಲಾಕೃತಿ ಅಲಂಕಾರಿಕ ಕಟ್ಟಡವಾಗಿದೆ. ಹಾಗಾಗಿ ವೆಚ್ಚ ಹೆಚ್ಚಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಾರಂಭಿಕ ಅಂದಾಜು ಮೊತ್ತ 220 ಕೋಟಿ ರೂ. ಇತ್ತು. ಎರಡು ಬಾರಿ ಇದು ಪರಿಷ್ಕರಣೆ ಆಗಿದೆ. ಪರಿಷ್ಕೃತ ಅಂದಾಜು ಮೊತ್ತ 449.22 ಕೋಟಿಗೆ ಅನುಮೋದನೆ ನೀಡಲಾಗಿದೆ.

ಹಳೆ ಮತ್ತು ಹೊಸ ರನ್‌ ವೇಗೆ 247.98 ಕೋಟಿ ವೆಚ್ಚ ಮಾಡಲಾಗಿದೆ. ಬಾಕಿ ಸುಮಾರು 21.85 ಕೋಟಿ ಮಾತ್ರ ಪಾವತಿಗೆ ಬಾಕಿ ಇದೆ. ಸದಸ್ಯರು ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳಿಂದ ಮಾಹಿತಿ ತರಿಸಿ ಸದಸ್ಯರಿಗೆ ನೀಡುತ್ತೇನೆ. ಅವರಿಗೆ ಅದು ಸಮಾಧಾನ ತರದಿದ್ದರೆ ತನಿಖೆ ನಡೆಸುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next