Advertisement

Queen Elizabeth II: ರಾಣಿ ಎರಡನೇ ಎಲಿಜಬೆತ್‌ ಸ್ಮರಣಾರ್ಥ ದುಬಾರಿ ನಾಣ್ಯ ಅನಾವರಣ

08:29 PM Sep 08, 2023 | Team Udayavani |

ಲಂಡನ್‌: ಬ್ರಿಟನ್‌ ರಾಜಮನೆತನದ ರಾಣಿ ಎರಡನೇ ಎಲಿಜಬೆತ್‌ ನಿಧನರಾಗಿ ಶುಕ್ರವಾರಕ್ಕೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಬ್ರಿಟನ್‌ ರಾಜಮನೆತನವು ನಾಣ್ಯವನ್ನು ಹೊರತಂದಿದೆ.

Advertisement

3.61 ಕೆಜಿ ಚಿನ್ನ, 6426 ವಜ್ರಗಳಿಂದ ನಾಣ್ಯವನ್ನು ರಚಿಸಲಾಗಿದೆ. ಇದರ ಮೌಲ್ಯ 192 ಕೋಟಿ ರೂ. (18.47 ಮಿಲಿಯನ್‌ ಯೂರೋ) ಇದೆ. ನಾಣ್ಯವು 9.6 ಇಂಚು ಸುತ್ತಳತೆ ಹೊಂದಿದ್ದು, ಬಾಸ್ಕೆಲ್‌ ಬಾಲ್‌ಗಿಂತಲೂ ಅಗಲವಿದೆ. ಈಸ್ಟ್‌ ಇಂಡಿಯಾ ಕಂಪನಿಯು ಈ ನಾಣ್ಯವನ್ನು ವಿನ್ಯಾಸಗೊಳಿಸಿದೆ. ಕಾಮನ್‌ವೆಲ್ತ್‌ ರಾಷ್ಟ್ರಗಳ ಕುಶಲಕರ್ಮಿಗಳು ಇದನ್ನು ಸಿದ್ಧಪಡಿಸಿದ್ದಾರೆ. ದಿವಂಗತ ರಾಣಿ ಎರಡನೇ ಎಲಿಜಬೆತ್‌ ಅವರ ಅನೇಕ ಭಾವಚಿತ್ರಗಳನ್ನು ನಾಣ್ಯವು ಒಳಗೊಂಡಿದೆ. ಕಲಾವಿದರಾದ ಮೇರಿ ಗಿಲ್ಲಿಕ್‌, ಅರ್ನಾಲ್ಡ್‌ ಮಚಿನ್‌, ರಾಫೆಲ್‌ ಮಕೌಫ್ ಮತ್ತು ಇಯಾನ್‌ ರ್‍ಯಾಂಕ್‌ ಬ್ರಾಡ್ಲೆ ಈ ಭಾವಚಿತ್ರಗಳನ್ನು ರಚಿಸಿದ್ದಾರೆ. ಈ ನಾಣ್ಯವು ವಿಶ್ವದಲ್ಲೇ ದುಬಾರಿ ನಾಣ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇದಕ್ಕೂ ಮುನ್ನ “ಡಬಲ್‌ ಈಗಲ್‌’ ನಾಣ್ಯವು ವಿಶ್ವದಲ್ಲೇ ಅತ್ಯಂತ ದುಬಾರಿ ನಾಣ್ಯ ಎಂದು ದಾಖಲೆ ಬರೆದಿತ್ತು. 2021ರಲ್ಲಿ ಇದರ ಹರಾಜು ನಡೆದ ಸಂದರ್ಭದಲ್ಲಿ 15.17 ಮಿಲಿಯನ್‌ ಯೂರೋಗಳಿಗೆ ನಾಣ್ಯ ಮಾರಾಟವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next