Advertisement

ಗರಿಗೆದರಿದ ವಿಮಾನ ನಿಲ್ದಾಣ ಕನಸು

11:18 AM Mar 07, 2019 | |

ಭಟ್ಕಳ: ಉತ್ತರ ಕನ್ನಡದಲ್ಲಿ ವಿಮಾನ ನಿಲ್ದಾಣ ಬೇಕು ಎನ್ನುವ ಕನಸು ಇಂದು ನಿನ್ನೆಯದಲ್ಲ. ಈ ಹಿಂದೆ ಬೈಂದೂರಿನ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಪ್ರಸ್ತಾವನೆ ಇತ್ತಾದರೂ ಅದು ಕೈಗೂಡದೇ ಇರುವುದರಿಂದ ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡದ ಜನತೆ ತೀವ್ರ ಅಸಾಮಾಧಾನಗೊಂಡಿದ್ದರು. ಕಾರವಾರದ ನೌಕಾನೆಲೆ ಬಳಸಿ ನಾಗರಿಕ ವಿಮಾನಯಾನ ಆರಂಭಿಸುವ ಕುರಿತು ಬೇಡಿಕೆ ಇದೆಯಾದರೂ ಇನ್ನೂ ತನಕ ಯಾವುದೂ ಕಾರ್ಯಗತವಾಗದೇ ಇರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

Advertisement

ಪಟ್ಟಣವು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಮಧ್ಯವರ್ತಿ ಪ್ರದೇಶವಾಗಿದ್ದು, ಇಲ್ಲಿ ವಿಮಾನ ನಿಲ್ದಾಣ ಆರಂಭಿಸಿದರೆ ಉಭಯ ಜಿಲ್ಲೆಯ ಜನತೆಗೂ ಅನುಕೂಲವಾಗುತ್ತದೆ ಎನ್ನುವ ಕೂಗು ಬಹಳ ವರ್ಷಗಳಿಂದ ಕೇಳಿ ಬಂದಿದೆ. ಆದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದರಿಂದ ಚಾಲನೆ ದೊರೆತಿಲ್ಲ. ಆದರೆ ಈಗ ಕಾರವಾರದ ಸಂಜಯ ರೇವಣ್‌ಕರ್‌ ಅವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವ ಮೂಲಕ ಉಭಯ ಜಿಲ್ಲೆಯವರ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ಜೀವ ತುಂಬಿದ್ದಾರೆ.

ಸರಕಾರಕ್ಕೆ ನೋಟಿಸ್‌ ಜಾರಿ
ಉಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಆರ್‌.ಜಿ. ಕೊಲ್ಲೆ ಅವರು ವಾದ ಮಂಡಿಸಿ ಪ್ರವಾಸೋದ್ಯಮ ತಾಣವಾಗಿರುವ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಹೊಂದಲು ವಿಮಾನ ನಿಲ್ದಾಣ ಅನಿವಾರ್ಯವಾಗಿದೆ ಎಂದಿದ್ದಾರೆ. ಭಟ್ಕಳದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಿಸಲೂ ಅವರು ಕೋರಿಕೆ ಸಲ್ಲಿಸಿದ್ದರಿಂದ ಪರಿಶೀಲನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಉಚ್ಚ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. 

ವರದಾನವಾಗಿರುವ ಉಡಾನ್‌ ಯೋಜನೆ
ಭಾರತ ಸರಕಾರದ ಉಡಾನ್‌ ಯೋಜನೆಯು ನಾಗರಿಕ ವಿಮಾನ ಸೇವೆ ಕಲ್ಪಿಸಲು ಒಂದು ವರದಾನವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಈ ಸೌಲಭ್ಯ ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ದೇಶವ ಒಬ್ಬ ಸಾಮಾನ್ಯ ನಾಗರಿಕನೂ ಕೂಡಾ ವಿಮಾನ ಸೇವೆ ಪಡೆಯುವಂತಾಗಬೇಕು, ಹೆಚ್ಚು ಹೆಚ್ಚು ಗ್ರಾಮೀಣ ಭಾಗಗಳು ಇದರಲ್ಲಿ ಸೇರಿಸಬೇಕು ಎನ್ನುವುದು ಉಡಾನ್‌ ಯೋಜನೆ ಮುಖ್ಯ ಉದ್ದೇಶವಾಗಿದೆ. ವಿಮಾನ ನಿಲ್ದಾಣಕ್ಕೆ ಕನಿಷ್ಠ ರನ್‌ ವೇ 6000 ಅಡಿ (1829 ಮೀ) ಉದ್ದವು ಸುಮಾರು 2,00,000 ಎಲ್‌.ಬಿ.ಎಸ್‌(90,728 ಕೆ.ಜಿ) ತೂಕದ ವಿಮಾನಗಳಿಗೆ ಸಾಕಾಗುತ್ತದೆ. ಇದಕ್ಕೂ ದೊಡ್ಡ ಹಾಗೂ ಅಗಲವಿರುವ ವಿಮಾನಗಳಿಗೂ ಕೂಡಾ 8000 ಅಡಿ (2438 ಮೀ) ರನ್‌ವೇ ಸಾಕಾಗುತ್ತದೆ ಹಾಗೂ ತೃಪ್ತಿದಾಯಕವಾಗಿತ್ತದೆ.

ಮುಂಡಳ್ಳಿ ಗುಡ್ಡ ಪ್ರಾಶಸ್ತ್ಯ  ಜಾಗಾ
ತಾಲೂಕಿನಲ್ಲಿ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಮಾಡಲು ಮುಂಡಳ್ಳಿಯ ಗುಡ್ಡ ಪ್ರಶಸ್ತ್ಯ ಸ್ಥಳವಾಗಿದ್ದು, ಸುಮಾರು 1000 ಎಕರೆ ಪ್ರದೇಶ ಒಂದೇ ಕಡೆಯಲ್ಲಿ ದೊರೆಯುವುದಲ್ಲದೇ ಇದು ರನ್‌ ವೇ ನಿರ್ಮಾಣಕ್ಕೆ ಕೂಡಾ ಅತ್ಯಂತ ಸೂಕ್ತವಾಗಿದೆ. ಸಮುದ್ರದಿಂದ ಎತ್ತರದಲ್ಲಿದ್ದು, ಸುತ್ತಲೂ ಹಸಿರು ಕೂಡಿರುವುದರಿಂದ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣಕ್ಕೆ ಅತ್ಯಂತ ಸೂಕ್ತ ಸ್ಥಳ ಎನ್ನುವುದು ಮಾತ್ರ ಸತ್ಯ.

Advertisement

„ಆರ್‌.ಕೆ. ಭಟ್ಕಳ 

Advertisement

Udayavani is now on Telegram. Click here to join our channel and stay updated with the latest news.

Next