ನವದೆಹಲಿ: ಆಟಿಕೆಗಳ ಕ್ಷೇತ್ರಕ್ಕೆ ಸಂಬಂಧಿಸಿ ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ವಿಶೇಷ ನೀತಿ ಪ್ರಕಟಿಸುವ ಸಾಧ್ಯತೆ ಇದೆ. ಇದರಿಂದಾಗಿ ದೇಶೀಯ ಆಟಿಕೆಗಳ ಉತ್ಪಾದನೆ ಮತ್ತು ಅವುಗಳ ರಫ್ತಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಜತೆಗೆ ಈ ಕ್ಷೇತ್ರದಲ್ಲಿ ಹೊಸ ರೀತಿಯ ಸ್ಟಾರ್ಟಪ್‌ಗ್ಳನ್ನು ಶುರು ಮಾಡುವವರಿಗೂ ಬೆಂಬಲ ನೀಡಿದಂತಾಗುತ್ತದೆ.
ಇದನ್ನೂ ಓದಿ:ಚಳಿಗಾಲದಲ್ಲಿ ಆರೋಗ್ಯ ಸ್ಥಿರತೆ: ಈ ಯೋಗಾಸನಗಳು ಸಹಕಾರಿ
ಸದ್ಯ ಈ ಕ್ಷೇತ್ರಕ್ಕೆ ಶೇ.0.5ಕ್ಕಿಂತ ಕಡಿಮೆ ಅನುದಾನ ಮೀಸಲಿಡಲಾಗುತ್ತಿದೆ. ದೇಶದಲ್ಲಿ ಆಟಿಕೆ ಉತ್ಪಾದನಾ ಕ್ಷೇತ್ರ ಅಸಂಘಟಿತ ವಲಯದಲ್ಲಿದೆ. ಸುಮಾರು 4 ಸಾವಿರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳೇ ಹೆಚ್ಚಾಗಿ ಈ ಕ್ಷೇತ್ರದಲ್ಲಿವೆ. ಚೀನಾ, ಶ್ರೀಲಂಕಾ, ಮಲೇಷ್ಯಾ, ಅಮೆರಿಕ, ಹಾಂಕಾಂಗ್, ಜರ್ಮನಿಯಿಂದ ದೇಶಕ್ಕೆ ಆಟಿಕೆಗಳನ್ನು ಆಮದು ಮಾಡಲಾಗುತ್ತದೆ.
2020ರಲ್ಲಿ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ವಿದೇಶಿ ಆಟಿಕೆಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಸುಂಕದಲ್ಲಿ ಹೆಚ್ಚಳ ಮಾಡುವ ಪ್ರಸ್ತಾಪ ಮಾಡಿತ್ತು.
ದೇಶೀಯ ಆಟಿಕೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಇಂಗಿತ ಹೊಂದಿದೆ. ಇದರಿಂದಾಗಿ ದೇಶದಲ್ಲಿ ಉತ್ಪಾದನೆಯಾ ಗುವ ಆಟಿಕೆಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿಯೂ ನೆರವಾಗುವ ಸಾಧ್ಯತೆ ಇದೆ.