Advertisement
ಮಂಗಳೂರು/ಉಡುಪಿ: ದಸರಾ-ದೀಪಾವಳಿಗೂ ಸಂಭ್ರಮ ಆವರಿಸುತ್ತಿದ್ದಂತೆ ಆಭರಣೋದ್ಯಮದಲ್ಲೂ ಉತ್ಸಾಹ ಇಮ್ಮಡಿಸಿದೆ.
ಹಬ್ಬಕ್ಕೆಂದು ಹೊಸ ಡಿಸೈನ್‌ಗಳು ಬಂದಿವೆ. ಚಿನ್ನದಲ್ಲಿ ರೋಸ್ ಗೋಲ್ಡ್, ವೈಟ್ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಹಳೆಯ ಕಾಲದ ಆಭರಣವಾದ ಟೆಂಪಲ್ ಕಲೆಕ್ಷನ್‌ನತ್ತ ಒಲವಿದೆ.ಕೋಲ್ಕತಾ, ಮುಂಬಯಿ, ಕೇರಳ, ಕೊಯಮತ್ತೂರು, ಮಂಗಳೂರು, ಸಿಂಗಾಪುರ, ಮಲೇಷ್ಯಾ, ಟಕೀಶ್ ಡಿಸೈನ್‌ಗಳ ಖರೀದಿ ಸಹ ಈ ಸಮಯದಲ್ಲೇ.
Related Articles
Advertisement
ವಜ್ರಾಭರಣಗಳಿಗೂ ಬೇಡಿಕೆವಜ್ರಾಭರಣಗಳಲ್ಲೂ ಹೊಸ ವಿನ್ಯಾಸಗಳು ಬಂದಿವೆ. ಅನ್‌ಕಟ್ ಡೈಮಂಡ್, ಫ್ಯಾನ್ಸಿ ಡಿಸೈನ್‌ಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಸುಮಾರು 5 ಸಾವಿರ ರೂ.ಗಳಿಂದ ವಜ್ರಾಭರಣ ಲಭ್ಯ. ಬೆಳ್ಳಿಯ ಚಾಂದ್‌ಬಾಲಿ, ಜುಮುಕಿಗಳು, ಕ್ಲಿಪ್ ಮೂಗುತಿಗಳು, ಉಂಗುರಗಳಿಗೆ ಯುವಜನರಿಂದ ಬೇಡಿಕೆ ಹೆಚ್ಚುತ್ತಿದೆಯಂತೆ. “ಈ ಹಬ್ಬದಲ್ಲಿ ಕೈಬಳೆ, ಚೈನ್, ಬ್ರೇಸ್‌ಲೆಟ್‌ಗಳು ಹೆಚ್ಚು ಮಾರಾಟವಾಗುವ ನಿರೀಕ್ಷೆ ನಮ್ಮದು. ಇದೇ ಕಾರಣದಿಂದ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ನಿಗದಿತ ಪ್ರಮಾಣದ ಚಿನ್ನಾಭರಣ, ಡೈಮಂಡ್ ಖರೀದಿಗೆ ರಿಯಾಯಿತಿ, ಹಳೇ ಆಭರಣಗಳ ವಿನಿಮಯಕ್ಕೆ ಕೊಡುಗೆ ಲಭ್ಯವಿದೆ. ದಸರಾ-ದೀಪಾವಳಿ ನಮ್ಮ ವ್ಯಾಪಾರಕ್ಕೆ ಇನ್ನಷ್ಟು ಉತ್ಸಾಹ ತುಂಬಲಿದೆ’ ಎಂಬುದು ಉಡುಪಿ ಸ್ವರ್ಣ ಜುವೆಲರ್ನ ಮಾಲಕರಾದ ಗುಜ್ಜಾಡಿ ರಾಮದಾಸ ನಾಯಕ್‌ರ ವಿಶ್ವಾಸದ ಮಾತು. “ನಮ್ಮ ಮಳಿಗೆಯು ಅ.5ರಂದು 55 ವಸಂತಗಳನ್ನು ಪೂರೈಸುತ್ತಿದೆ. ಇದೇ ಸಮಯದಲ್ಲಿ ನವರಾತ್ರಿ ಬಂದಿರುವುದರಿಂದ ವಿಶೇಷ ಆಫರ್ ನೀಡುತ್ತಿದ್ದೇವೆ.
ವಜ್ರಾ ಭರಣ, ಪ್ಲಾಟಿನಂ ಆಭರಣ ಖರೀದಿಗೆ ರಿಯಾ ಯಿತಿ ನೀಡು ತ್ತಿದ್ದೇವೆ’ ಎನ್ನುತ್ತಾರೆ ಮಂಗಳೂರಿನ ಜೋಸ್ ಅಲುಕ್ಕಾಸ್ ಜುವೆಲರಿಯ ಮ್ಯಾನೇಜರ್ ಅಗಸ್ಟಿನ್.
“ಇತ್ತೀಚಿನ ದಿನಗಳಲ್ಲಿ ಹಗುರದ ಆಭರಣಗಳ ಖರೀದಿಗೆ ಹೆಚ್ಚಿನ ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಇವು ನೋಡಲು ಭಾರ ಎಂದೆನಿಸಿದರೂ ಲೈಟ್‌ವೈಟ್ ಆಗಿರುತ್ತವೆ. ರಿಯಾಯಿತಿ ಸೌಲಭ್ಯ ನಮ್ಮಲ್ಲೂ ಇದೆ’ ಎನ್ನುತ್ತಾರೆ ಮಂಗಳೂರಿನ ಲಕ್ಷ್ಮೀದಾಸ್ ಜುವೆಲರಿ ಶಾಪ್‌ನ ಸಹ ಮಾಲಕ ವಿಷ್ಣು ಆಚಾರ್ಯ. ನವರಾತ್ರಿ ವೇಳೆ ಚಿನ್ನದ ಪದಕ ಖರೀದಿಗೂ ಆಸಕ್ತಿ ಹೆಚ್ಚು. 2 ಗ್ರಾಂನಿಂದ ಹಿಡಿದು 8 ಗ್ರಾಂಗಳ ಲಕ್ಷ್ಮೀ ದೇವರ ಪದಕಗಳಿಗೆ ಬೇಡಿಕೆ. ಮಕ್ಕಳ ನಕ್ಷತ್ರಕ್ಕೆ ಹೊಂದಿಕೊಂಡ ಬಣ್ಣದ ಹರಳು, ಚಿನ್ನ, ವಜ್ರಗಳ ಟಿಕ್ಕಿಗಳ ಖರೀದಿ ಜೋರಿದೆ. “ನಮ್ಮ ಮಳಿಗೆಯಲ್ಲೂ ಚಿನ್ನದ ಮೇಕಿಂಗ್ ಚಾರ್ಜ್ ಮೇಲೆ ರಿಯಾಯಿತಿ, ವಜ್ರ ಖರೀದಿಗೆ ಡಿಸ್ಕೌಂಟ್, ವೆರೈಟಿ ಡಿಸೈನ್‌ಗಳು, ಮದುಮಗಳ ಕಲೆಕ್ಷನ್, ಪಾರ್ಟಿವೇರ್ ಕಲೆಕ್ಷನ್‌ಗೆ ಬೇಡಿಕೆ ಹೆಚ್ಚಿದೆೆ’ ಎನ್ನುತ್ತಾರೆ ಮಂಗಳೂರಿನ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಪ್ರಧಾನ ವ್ಯವಸ್ಥಾಪಕ ಉಣ್ಣಿತ್ತಾನ್. ದಸರಾ ಹಬ್ಬಕ್ಕೆಂದು ಕಲ್ಯಾಣ್ ಜುವೆಲರಿಯಲ್ಲೂ ವಿಶೇಷ ಆಫರ್‌ಗಳಿವೆ. ವಜ್ರಾಭರಣ, ನ್ಯಾಚುರಲ್ ಸ್ಟೋನ್‌ಗಳಿಗೆ ಆಫರ್ ಮತ್ತು ಚಿನ್ನಾಭರಣ ಖರೀದಿಗೆ ಮೇಕಿಂಗ್ ಚಾರ್ಜ್ ಮೇಲೆ ರಿಯಾಯಿತಿ ಇದೆ. ದಸರಾ ಸಂಭ್ರಮದಲ್ಲೇ ಮುಳಿಯ ಚಿನ್ನೋತ್ಸವ ಆರಂಭ. ಈ ವೇಳೆ ಲಕ್ಕಿ ಡ್ರಾ, ವಿಜೇತರಿಗೆ ಒಂದು ಚಿನ್ನದ ನಾಣ್ಯ, ಗಂಟೆಗೊಂದು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶವೂ ಇದೆ. ಡ್ಯಾನ್ಸಿಂಗ್ ಸ್ಟೋನ್, ರೋಸ್‌ಗೊàಲ್ಡ್, ಡೆಲಿಕೇಟ್ ಸ್ಪ್ರಿಂಗ್ ಕಲೆಕ್ಷನ್ ಆಭರಣಗಳು ವಿಶೇಷ ಎನ್ನುತ್ತಾರೆ ಪುತ್ತೂರಿನ ಮುಳಿಯ ಜುವೆಲರಿ ಶಾಪ್‌ನ ಮಾಲಕ ಕೇಶವ ಪ್ರಸಾದ್. ಮದುವೆ ಖರೀದಿಯ ಆಫರ್ ಆರಂಭವಾಗಿದೆ ನಮ್ಮಲ್ಲಿ. 5 ಪವನ್‌ಗೂ ಮಿಕ್ಕಿ ಚಿನ್ನ ಖರೀದಿಗೆ ರಿಯಾಯಿತಿ ಇದೆ. ಸಾಂಪ್ರದಾಯಿಕ ಆಭರಣಗಳಿಗೆ ದರ ಹೆಚ್ಚಾದ ಕಾರಣ ಅನೇಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಗುರದಿಂದ ಕೂಡಿದ ಸಾಂಪ್ರದಾಯಿಕ ಆಭರಣಗಳನ್ನೂ ಒದಗಿಸಲಾಗುತ್ತಿದೆ ಎನ್ನುತ್ತಾರೆ ಪುತ್ತೂರಿನ ಜಿ.ಎಲ್. ಆಚಾರ್ಯ ಜುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ. ಮದುವೆ ಸೀಸನ್ ಆರಂಭ
ಇನ್ನೇನು ಕೆಲವು ದಿನಗಳಲ್ಲಿ ಮದುವೆ ಸೀಸನ್ ಆರಂಭಗೊಳ್ಳಲಿದ್ದು, ಚಿನ್ನಾಭರಣ ಮಳಿಗೆಯಲ್ಲಿ ಆಭರಣಗಳ ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಯುವತಿಯರು ಫ್ಯಾನ್ಸಿ ಆಭರಣ ಕೊಂಡುಕೊಳ್ಳಲು ಇಷ್ಟಪಡುತ್ತಿದ್ದಾರೆ. ಅದಕ್ಕೆಂದು ಆಭರಣ ಪೆಂಡೆಂಟ್‌ಗಳು ಮಾರುಕಟ್ಟೆಗೆ ಬಂದಿವೆ.