Advertisement
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಿಂದ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರಕಾರ ತಕರಾರು ಅರ್ಜಿ ಸಲ್ಲಿಸಿದ್ದು, ಸಮರ್ಪಕ ದಾಖಲೆಗಳ ಸಮೇತ ವಾದ ಮಂಡನೆ ಮಾಡುತ್ತೇವೆ. ಸದ್ಯಕ್ಕೆ ರಾಜ್ಯ ಸರಕಾರದಿಂದಲೇ ಬರ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು.
Related Articles
ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಬಿಡುವುದಿಲ್ಲ ಎಂಬ ಡಿಎಂಕೆ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವರೂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ತಿಳಿಸುತ್ತಾರೆ ಎಂದಷ್ಟೇ ಹೇಳಿದರು.
Advertisement
ಮೇಕೆದಾಟು ಯೋಜನೆಯೇ ಅವೈಜ್ಞಾನಿಕ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀರಾವರಿ ಯೋಜನೆಗಳೇ ಅವೈಜ್ಞಾನಿಕ ಎನ್ನುವವರಿದ್ದಾರೆ. ನರ್ಮದಾ ಯೋಜನೆಗೆ ಅನೇಕರು ಪ್ರತಿಭಟಿಸಿದ್ದುಂಟು. ಮೇಧಾ ಪಾಟ್ಕರ್ ಅವರು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕೆಂದಾಗಲೂ ಇಂತಹ ಹೋರಾಟಗಳು ನಡೆದಿವೆ. ಪರಿಸರ ಹಾಗೂ ಮನುಷ್ಯನ ಆವಶ್ಯಕತೆಯ ಪೂರೈಕೆಯನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ಬೆಂಗಳೂರು ಬೆಳೆದಿರುವುದೂ ಅವೈಜ್ಞಾನಿಕ ಎನ್ನುತ್ತಾರೆ. ಆದರೆ ಜನರ ಆವಶ್ಯಕತೆ ಪೂರೈಸಲೇಬೇಕಿದೆ ಎಂದರು.