Advertisement

ಎಳ್ಳು ಬಂಪರ್ ಇಳುವರಿಗೆ ಬಂಪರ್ ಬೆಲೆ ನಿರೀಕ್ಷೆ..!

10:51 AM Aug 23, 2021 | Team Udayavani |

ಕುಷ್ಟಗಿ (ಕೊಪ್ಪಳ ) : ಮುಂಗಾರು ಹಂಗಾಮಿನ ಪ್ರತಿ ವರ್ಷ ಎಳ್ಳು ಬೆಳೆ ಒಂದಿಲ್ಲೊಂದು‌ ರೋಗ, ಮಳೆ ಕೊರತೆಯಿಂದ ಬೆಳೆ ಅಷ್ಟಕಷ್ಟೇ ಇರುತ್ತಿತ್ತು. ಆದರೆ ಈ ಬಾರಿ ಉತ್ತಮ ಮಳೆ, ರೋಗ ರುಜಿನ ಸುಳಿಯದೇ ಇರುವುದು ಎಳ್ಳು ಬಂಪರ್ ಇಳುವರಿಗೆ ಬಂಪರ್ ಬೆಲೆ ನಿರೀಕ್ಷಿಸಲಾಗಿದೆ.

Advertisement

ಪ್ರಸ್ತುತ ದಿನಮಾನಗಳಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ, ಶೇಂಗಾ ಖಾದ್ಯ ತೈಲ ಬೆಲೆ ಹೆಚ್ಚಿದ್ದು, ಅದೇ ರೀತಿ ಎಳ್ಳು ಉತ್ಪನ್ನದ ಬೆಲೆ ಯಾವತ್ತಿಗೂ ಕಡಿಮೆ ಆಗಿಲ್ಲ. ಈ ಬಾರಿ ಮಳೆ ಹಾಗೂ ರೋಗ ರುಜಿನ ಕಡಿಮೆ ಹಿನ್ನೆಲೆಯಲ್ಲಿ ಸಮೃದ್ದ ಬೆಳೆ ನಿರೀಕ್ಷೆಯಲ್ಲಿ ಕಟಾವಿಗೆ ಮುಂದಾಗುವ ರೈತರಿಗೆ ಮಳೆ ಅಡಚಣೆಯಾಗಿದೆ. ಇನ್ನೂ ವಾರಂತ್ಯದಲ್ಲಿ ಕಡಾವು ಆಗುವ ಬೆಳೆಗೆ ಆಗಾಗ್ಗೆ ಹಿಂಗಾರು ಮಳೆ ಕಾಟ, ಕಟಾವಿಗೆ ಹಿನ್ನೆಡೆಗೆ ಕಾರಣವಾಗಿದೆ.

ಇದನ್ನೂ ಓದಿ : ಇಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ: ಗುಡಿಬಂಡೆ ತಾಲ್ಲೂಕಿಗಿಲ್ಲ ಸೂಕ್ತ ಸ್ಥಾನ ಮಾನ

ಕುಷ್ಟಗಿಯ ರೈತ ಹನಮಂತಪ್ಪ ‌ಹಳ್ಳಿ ಕುಷ್ಟಗಿ ಸೀಮಾದಲ್ಲಿ 9 ಎಕರೆಯಲ್ಲಿ‌ ಏಕ ಬೆಳೆ ಬೆಳೆದಿದ್ದಾರೆ. ಎರಡು ಸೇರು ಎಳ್ಳಿನ ಬಿತ್ತನೆ ಬಳಿಕ ಹದವರಿತ ಬೆಳೆಯಿಂದ ಇಳುವರಿ ಸಮೃದ್ಧ ಬೆಳೆಯಿಂದ ನಳನಳಿಸುತ್ತಿದೆ. ರೈತ ಹನಮಂತಪ್ಪ ಹಳ್ಳಿ ಅವರು ಕೃಷಿ ಇಲಾಖೆಯ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು ಸುಧಾರಿತ ದಾರವಾಡ ಎಸ್ ಎಸ್-ಎಂ ತಳಿ ಶಿಫಾರಸ್ಸು ಮೇರೆಗೆ ನಾಟಿ ಮಾಡಿದ್ದು ಅದೇ ಪ್ರಕಾರ ಬೆಳೆದಿದ್ದಾರೆ. ಈ ಜಮೀನಿನಲ್ಲಿ ಇದೇ ಬೆಳೆ ಮೊದಲಾಗಿದ್ದು ಈ ಬೆಳೆಯ ಬಿತ್ತನೆ ಪೂರ್ವದಲ್ಲಿ 17 ಗಾಡಿ ತಿಪ್ಪೆ ಗೊಬ್ಬರ ಹಾಕಿದ್ದರಿಂದ ಅಪಾರ ಬೆಳೆ ಬಂದಿದೆ.

ಬಿತ್ತನೆಯು ಸಹ ಅಚ್ಚುಕಟ್ಟಾಗಿದ್ದರಿಂದ ಸಾಲಿನಿಂದ ಸಾಲಿಗೆ 2  ಅಡಿ ಇದ್ದು ಸಾಕಷ್ಟು ಗಾಳಿ ಬೆಳಕಿನ ಅವಕಾಶ ಇರುವ ಹಿನ್ನೆಲೆಯಲ್ಲಿ ರೋಗ ರುಜಿನ ಬಾಧಿಸಿಲ್ಲ.ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬಿಳಿ ಎಳ್ಳು ಧಾರಣಿ 9 ಸಾವಿರಾರು ಇದೆ. ಈ ಉತ್ಪನ್ನ ಬೇಡಿಕೆಯಲ್ಲಿರುವುದರಿಂದ ಇನ್ನು ಬೆಲೆ ಹೆಚ್ಚು ಸಾದ್ಯತೆ ಇದೆ ಎನ್ನುವುದು ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರ ಮಾತು.

Advertisement

ಇದನ್ನೂ ಓದಿ : ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿ ಅಜೀಜುಲ್ಲಾ ಫಜ್ಲಿ ಮರು ನೇಮಕ

Advertisement

Udayavani is now on Telegram. Click here to join our channel and stay updated with the latest news.

Next