Advertisement
ಸಾಂಕ್ರಾಮಿಕ ಪೀಡಿತ 2020ರಲ್ಲಿ ಎಲ್ಲ ಮಾಧ್ಯಮಗಳಲ್ಲಿ ಜಾಹೀರಾತು ವೆಚ್ಚವು ಶೇ. 21.5ರಷ್ಟು ಕುಸಿತ ಕಂಡಿತ್ತು. 2021ರಲ್ಲಿ ಅದು ಶೇ. 23.5ರಷ್ಟು ಅಂದರೆ 80,123 ಕೋ.ರೂ.ಗಳಷ್ಟು ಹೆಚ್ಚಳವಾಗಲಿದೆ ಎಂದು ಗ್ರೂಪ್ ಎಂ ಎಂಬ ವಿಶ್ಲೇಷಕ ಸಂಸ್ಥೆ ಭವಿಷ್ಯ ನುಡಿದಿದೆ. ಕೋವಿಡ್ ಲಾಕ್ ಡೌನ್ ಘೋಷಣೆಗೆ ಕೆಲವು ತಿಂಗಳುಗಳ ಹಿಂದೆ ಇದೇ ಸಂಸ್ಥೆಯು 2020ರಲ್ಲಿ ಜಾಹೀರಾತು ವೆಚ್ಚದಲ್ಲಿ ಶೇ. 10.7ರಷ್ಟು ಪ್ರಗತಿ ಉಂಟಾಗಲಿದೆ ಎಂದಿತ್ತು.
ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯ 2020-21ನೇ ಸಾಲಿನ ಬಡ್ಡಿದರಗಳು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಗಳಿವೆ. ಇಪಿಎಫ್ ಸಂಸ್ಥೆಯ ವಿಶ್ವಸ್ತರ ಸಭೆಯು ಮಾ. 4ರಂದು ಶ್ರೀನಗರದಲ್ಲಿ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಬಡ್ಡಿದರ ಘೋಷಣೆಯಾಗಲಿವೆ ಎನ್ನಲಾಗಿದೆ. ಬಡ್ಡಿದರ ಘೋಷಣೆಯನ್ನು ಇಪಿಎಫ್ ನ 5 ಕೋಟಿಗೂ ಹೆಚ್ಚು ಚಂದಾದಾರರು ಕಾತರದಿಂದ ನಿರೀಕ್ಷಿಸುತ್ತಿದ್ದು, ಕಳೆದ ವರ್ಷದ ಶೇ. 8.5 ಬಡ್ಡಿದರ ಮುಂದುವರಿಯುವುದೇ ಇಲ್ಲವೇ ಎಂಬುದನ್ನು ಎದುರುನೋಡುತ್ತಿದ್ದಾರೆ.