Advertisement

ಅಮೆರಿಕ ವೀಸಾ ನಿಷೇಧ ವಿಸ್ತರಣೆ

09:28 AM Aug 30, 2018 | Team Udayavani |

ವಾಷಿಂಗ್ಟನ್‌: ಎಚ್‌-1ಬಿ ವೀಸಾ ನೀಡಿಕೆಯ ಮೇಲೆ ಹೇರಲಾಗಿರುವ ತಾತ್ಕಾಲಿಕ  ನಿಷೇಧವನ್ನು ಅಮೆರಿಕ ಸರಕಾರ ಇನ್ನೂ ಐದು ತಿಂಗಳು ವಿಸ್ತರಿಸಿದೆ. ಇದರ ಜತೆಗೆ ಪ್ರೀಮಿಯಂ ಎಚ್‌-1ಬಿ ವೀಸಾ ನೀಡಿಕೆಯ ಮೇಲೂ ನಿಬಂಧನೆ ಮುಂದುವರಿದಿದೆ. ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಹೊಸ ನಿಷೇಧ 2019ರ ಫೆಬ್ರವರಿವರೆಗೆ ಇರಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್‌) ತಿಳಿಸಿದೆ. ಮಾರ್ಚ್‌ನಲ್ಲಿ ಪ್ರೀಮಿಯಂ ಎಚ್‌-1ಬಿ ವೀಸಾ ನೀಡಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರುವುದಾಗಿ ಟ್ರಂಪ್‌ ಸರಕಾರ ಘೋಷಿಸಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next