Advertisement

ತೆರಿಗೆ ವ್ಯಾಪ್ತಿ ವಿಸ್ತರಣೆ; ಹೊಸ ವಿಚಾರ ಸೇರಿಸಲು ಪ್ರಸ್ತಾವ

02:16 AM Aug 15, 2020 | mahesh |

ಹೊಸದಿಲ್ಲಿ: ನೇರ ತೆರಿಗೆ ಆದಾಯ ಹೆಚ್ಚಿಸುವ ಪ್ರಕ್ರಿಯೆಗಳಿಗೆ ಕೇಂದ್ರ ಸರಕಾರ ಚಾಲನೆ ನೀಡಿದ್ದು, ತೆರಿಗೆ ಅವಗಾಹನೆಯ ವ್ಯಾಪ್ತಿಗೆ ಈಗ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸಲಾಗಿದೆ. ವಾರ್ಷಿಕ 1 ಲಕ್ಷ ರೂ.ಗಳಿಗೂ ಹೆಚ್ಚು ಶಾಲಾ ಶುಲ್ಕ ಪಾವತಿ, ವಾರ್ಷಿಕ 1 ಲಕ್ಷ ರೂ. ಮಿಕ್ಕಿದ ಮನೆ ಅಥವಾ ಕಚೇರಿಯ ವಿದ್ಯುತ್‌ ಬಿಲ್‌ ಪಾವತಿ, ವಾರ್ಷಿಕ 50 ಸಾವಿರ ರೂ.ಗಿಂತ ಹೆಚ್ಚು ಕೌಟುಂಬಿಕ ಆರೋಗ್ಯ ವಿಮಾ ಪ್ರೀಮಿಯಂ, ಪ್ರವಾಸ ಸಂದರ್ಭ ದುಬಾರಿ ಹೊಟೇಲ್‌ಗ‌ಳಲ್ಲಿ ವಾಸ್ತವ್ಯ ಇತ್ಯಾದಿಗಳನ್ನು ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭ ಫಾರಂ ನಂಬರ್‌ 26 ಎಎಸ್‌ನಲ್ಲಿ ಉಲ್ಲೇಖೀಸಬೇಕು ಎಂಬ ಪ್ರಸ್ತಾವನೆಯನ್ನು ಆದಾಯ ತೆರಿಗೆ ಇಲಾಖೆ ಸಲ್ಲಿಸಿದೆ. ನೇರ ತೆರಿಗೆ ಆದಾಯ ಹೆಚ್ಚಿಸುವ ಪ್ರಕ್ರಿಯೆಗಳಿಗೆ ಪ್ರಧಾನಿ ಮೋದಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ.

Advertisement

130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ತೆರಿಗೆ ಪಾವತಿಸುವವರು ಕೇವಲ 1.3 ಕೋಟಿ ಜನ ಮಾತ್ರ. 2018-20ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಕೆಯಾಗಿರುವ ತೆರಿಗೆ ರಿಟರ್ನ್ಸ್ಗಳ ಸಂಖ್ಯೆ 6.33 ಕೋಟಿಯಷ್ಟಿದ್ದು, ಅದನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ನೇರ ತೆರಿಗೆ ಮೂಲಕ ಬರುವ ಆದಾಯವನ್ನು ವಿಸ್ತರಿಸುವ ಉದ್ದೇಶದಿಂದ ಈ ಹೊಸ ಪ್ರಸ್ತಾವನೆಗಳನ್ನು ಮುಂದಿಡಲಾಗಿದೆ.

ವಿದೇಶ ಮತ್ತು ದೇಶೀಯ ವಿಮಾನ ಸಾರಿಗೆ ವೆಚ್ಚ, ಆಭರಣ ಖರೀದಿ, ರಿಟೇಲ್‌ ಶೋ ರೂಂಗಳಿಂದ ಖರೀದಿಸಲಾಗುವ ಗೃಹೋಪಯೋಗಿ ಅಥವಾ ಕಚೇರಿ ಸಾಮಗ್ರಿಗಳು, 1 ಲಕ್ಷ ರೂ.ಗಳಿಗಿಂತ ಹೆಚ್ಚು ಬೆಲೆಬಾಳುವ ಕಲಾಕೃತಿ ಖರೀದಿ, ಷೇರು ಹೂಡಿಕೆಗಳು, ಚಾಲ್ತಿ ಖಾತೆಗಳಲ್ಲಿ 50 ಲಕ್ಷ ರೂ.ಗಿಂತ ಹೆಚ್ಚು ಮೇಲ್ಪಟ್ಟ ಠೇವಣಿಗಳು ಕೂಡ ಇನ್ನು ಆದಾಯ ತೆರಿಗೆ ಅವಗಾಹನೆ ವ್ಯಾಪ್ತಿಗೆ ಒಳಪಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next