Advertisement

ಆರೋಗ್ಯ ಕಾರ್ಯಕರ್ತರ ವಿಮೆ ವಿಸ್ತರಣೆ

12:18 AM Jun 22, 2020 | Sriram |

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಲಾಗಿರುವ 50 ಲಕ್ಷ ರೂ.ಗಳ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ಸೆಪ್ಟಂಬರ್‌ ವರೆಗೆ ವಿಸ್ತರಿಸಿದೆ.

Advertisement

22.12 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ವಿಮೆ ಕಂಪೆನಿ ಮೂಲಕ ಜಾರಿಗೊಳಿಸಲಾಗಿರುವ ಈ ಯೋಜನೆ ಜೂ.30ಕ್ಕೆ ಮುಕ್ತಾಯ   ವಾಗಲಿತ್ತು. 2020ರ ಮಾ.30ರಿಂದ ಯೋಜನೆ ಜಾರಿಯಾಗಿತ್ತು.

ಕೋವಿಡ್-19 ಪೀಡಿತರ ಆರೈಕೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಈ ಯೋಜನೆ ಆರಂಭಿಸಲಾಗಿದ್ದು, ವೈದ್ಯರು, ನರ್ಸ್‌ಗಳು, ವೈದ್ಯ ಸಹಾಯಕರು, ನೈರ್ಮಲ್ಯ ಕಾರ್ಮಿಕರ ಸಹಿತ ಸರಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರು ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next