ಮುಂಬಯಿ : ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸುವುದೆಂದು ಮತಗಟ್ಟೆ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 358 ಅಂಕಗಳ ಭಾರೀ ಏರಿಕೆಯನ್ನು ಸಾಧಿಸಿದೆ.
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಭಾರೀ ನಗದು ಲಭ್ಯತೆ ಮತ್ತು ಡಾಲರ್ ಎದುರು ಮುಂದುವರಿದಿರುವ ರೂಪಾಯಿ ಬಲವರ್ಧನೆ ಇಂದು ಮುಂಬಯಿ ಶೇರು ಪೇಟೆಯಲ್ಲಿ ಹೊಸ ಉತ್ಸಾಹ, ಹುಮ್ಮಸ್ಸನ್ನು ತುಂಬಿತು.
ಮತಗಟ್ಟೆ ಸಮೀಕ್ಷೆಗಳ ಸತ್ಪರಿಣಾಮ ಇಂದು ಶೇರು ಮಾರುಕಟ್ಟೆಯ ಬಹುತೇಕ ಎಲ್ಲ ರಂಗದ ಶೇರುಗಳ ಮೇಲೆ ಕಂಡು ಬಂತು. ಇವುಗಳಿಗೆ ಮೆಟಲ್ ಮತ್ತು ಕ್ಯಾಪಿಟಲ್ ಗೂಡ್ಸ್ ಶೇರುಗಳು ಮುಂಚೂಣಿ ನಾಯಕತ್ವ ವಹಿಸಿದ್ದವು. ಡಾಲರ್ ಎದುರು ರೂಪಾಯಿ ಇಂದು 23 ಪೈಸೆಯಷ್ಟು ಬಲಿಷ್ಠಗೊ,ಡು 64.11 ರೂ.ಗೆ ಏರಿತು.
ಬೆಳಗ್ಗೆ 10.35ರ ಹೊತ್ತಿಗೆ ಸೆನ್ಸೆಕ್ಸ್ 288.81 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,535.51 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ 95.30 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 10,347.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ, ವೇದಾಂತ, ಮಾರುತಿ ಸುಜುಕಿ, ರಿಲಯನ್ಸ್, ರಿಲಯನ್ಸ್, ಎಸ್‌ಬಿಐ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.