ಲೋಕಸಭೆ ಚುನಾವಣೆಯ ಜೊತೆಗೆ ಈ ಬಾರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಈ ಪೈಕಿ ಆಂಧ್ರ ವಿಧಾನಸಭೆಯ ಮತದಾನೋತ್ತರ ಸಮೀಕ್ಷೆಯನ್ನು ಮಾತ್ರ ವಿವಿಧ ಸುದ್ದಿವಾಹಿನಿಗಳು ಮತ್ತು ಸಂಸ್ಥೆಗಳು ನಡೆಸಿವೆ. ಆಂಧ್ರದಲ್ಲಿ ಆಡಳಿತಾರೂಢ ಟಿಡಿಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದ್ದು, ವೈ ಎಸ್ ಆರ್ ಜಗನ್ ರೆಡ್ಡಿ ಗದ್ದುಗೆ ಏರುವ ಸಾಧ್ಯತೆಯಿದೆ. 175 ಸಂಖ್ಯಾಬಲದ ಶಾಸನಸಭೆಯಲ್ಲಿ ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಪಕ್ಷ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಊಹಿಸಲಾಗಿದೆ. ಇದು ಚಂದ್ರಬಾಬು ನಾಯ್ಡುಗೆ ಭಾರಿ ಹಿನ್ನಡೆಯಾಗಿದ್ದು, ಎನ್‌ಡಿಎ ಮೈತ್ರಿಕೂಟ ತೊರೆದ ನಂತರದಲ್ಲಿ ಎದುರಿಸಿದ ಭಾರಿ ಸೋಲು ಇದಾಗಲಿದೆ ಎನ್ನಲಾಗಿದೆ.
ಆಂಧ್ರ ಪ್ರದೇಶ (175)
ಸಮಗ್ರ ಸಮೀಕ್ಷೆಗಳು
ವೈಎಸ್‌ಆರ್‌ಸಿಪಿ 102
ಟಿಡಿಪಿ 68
ಜೆಎಸ್‌ಪಿ 4