Advertisement
ಫಿಟ್‌ನೆಸ್ ಬಟ್ಟೆಗಳು ಜತೆಗಿರಲಿಪ್ರವಾಸದ ಕೈಗೊಳ್ಳುವ ಸಮಯದಲ್ಲಿ ನಿಮ್ಮ ಬ್ಯಾಗ್‌ಗಳಲ್ಲಿ ಅಗತ್ಯ ವಸ್ತುಗಳ ಜತೆ ಶೂ, ವ್ಯಾಯಾಮಕ್ಕೆ ಸಂಬಂಧಿ ಫಿಕ್ಲೃಸ್ ಉಡುಪುಗಳು ಜತೆ ಇರಲಿ.
ಪ್ರವಾಸದ ವೇಳೆ ಒಂದೇ ಸಮನೇ ಬಿಡುವಿಲ್ಲದೆ ಪಯಣ ಮಾಡುವ ಬದಲು ನಡು ನಡುವೆ ಬಿಡುವು ಕೊಡುವುದು ಅತ್ಯುತ್ತಮ. ಇದರಿಂದ ದೈಹಿಕ ಹಾಗೇ ಮಾನಸಿಕ ಒತ್ತಡ ನಿವಾರಣೆ ಜತೆ ಸ್ಟ್ರೇಚಿಂಗ್, ಜತೆಜತೆಗೆ ಸಣ್ಣ ವಾಕ್ ಇರಲಿ. ಎಚ್ಚರದಿಂದ ವಾಹನ ಚಲಾಯಿಸಲು ಸಾಧ್ಯವಾಗುವುದು. ಸ್ಥಳೀಯ ಪರಿಸರದ ಪರಿಚಯ
ತಾವು ಭೇಟಿ ನೀಡುವ ಸ್ಥಳದ ಹಿನ್ನೆಲೆ, ಮತ್ತು ಸುತ್ತ ಮುತ್ತ ಇರುವ ಸ್ಥಳಗಳ ಬಗ್ಗೆ ಮೊದಲೆ ತಿಳಿದುಕೊಳ್ಳಿ( ಇಂದು ತಂತ್ರಜ್ಞಾನಗಳ ಬೆಳವಣಿಗೆಯಿಂದ ಗೂಗಲ್ ಮ್ಯಾಪ್‌ನಂತಹ ಮೊಬೈಲ್ ಆ್ಯಪ್ ಮೂಲಕ ಎಲ್ಲ ಸ್ಥಳೀಯ ಸ್ಥಳಗಳ ಮಾಹಿತಿ ಪಡೆಯಬಹುದಾಗಿದೆ.) ಸ್ಥಳೀಯ ಪಾರ್ಕ್ , ವಾಕಿಂಗ್ ವೇ ಮೊದಲಾದ ಸ್ಥಳಗಳನ್ನು ಗುರುತಿಸಿ ಬಳಿಕ ಇಲ್ಲಿ ಸೈಟ್ ಸೀಯಿಂಗ್, ವಾಕಿಂಗ್ ನಂತಹ ಚಟುವಟಿಕೆ ಕೈಗೊಳ್ಳಬಹುದು.
Related Articles
Advertisement
ಸ್ಥಳೀಯ ವ್ಯಾಯಾಮ ಸೌಲಭ್ಯಗಳ ಬಗ್ಗೆ ವಿಚಾರಿಸಿಇಂದು ಹೊಟೇಲ್ ಮಾಲ್‌ಗಳಲಿ ವ್ಯಾಯಾಮ ಚಟುವಟಿಕೆಗೆ ಸಂಬಂಧಿ ಜಿಮ್‌ಗಳ ವ್ಯವಸ್ಥೆ ಇವೆ. ನೀವು ಉಳಿದು ಕೊಳ್ಳುವ ಸ್ಥಳದಲ್ಲಿ ಇಂತಹ ಸೌಲಭ್ಯಗಳು ಇದ್ದಲ್ಲಿ ಅದರ ಸದುಪಯೋಗ ಪಡೆಯಬಹುದು. - ಕಾರ್ತಿಕ್ ಚಿತ್ರಾಪುರ