Advertisement

ಶ್ವಾಸಕೋಶದ ಆರೋಗ ಸಕೋಶದ ಆರೋಗ್ಯಕ್ಕೆ ವ್ಯಾಯಾಮ

05:07 AM Feb 05, 2019 | |

ಮನುಷ್ಯ ನಿಮಿಷಕ್ಕೆ 12 ರಿಂದ 15 ಸಲ ಉಸಿರಾಟ ಮಾಡುತ್ತಾನೆ. ಇದನ್ನು ಸರಿಯಾದ ರೀತಿಯ ಉಪಯೋಗಿಸಿದಲ್ಲಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಖದ ಸ್ನಾಯುಗಳನ್ನು ಸಡಿಲಗೊಳಿಸಿಕೊಂಡು ದೀರ್ಘ‌ವಾಗಿ ಉಸಿರನ್ನು ಮೂಗಿನಿಂದ ತೆಗೆದುಕೊಂಡು ದೀರ್ಘ‌ವಾಗಿ ಬಾಯಲ್ಲಿ ಬಿಡುವುದು. ದೀರ್ಘ‌ವಾದ ಉಸಿರಾಟದಿಂದ ಹೃದಯ ಭಾಗ ಅಗಲಗೊಳ್ಳುತ್ತದೆ, ಶ್ವಾಸಕೋಶಕ್ಕೆ ಸರಿಯಾದ ಆಮ್ಲಜನಕದ ಸರಬರಾಜು ದೊರೆಯುತ್ತದೆ. ಹೀಗೆ ಬಂದಿರುವ ಆಮ್ಲಜನಕವನ್ನು ಅದು ಇಡೀ ದೇಹದ ಭಾಗಗಳಿಗೆ ಕಳುಹಿಸಿ ಇಂಗಾಲದ ಡೈ ಆಕ್ಸೆ ೖಡ್‌ ಅನ್ನು ದೇಹದಿಂದ ಹೊರ ಕಳುಹಿಸುವ ವ್ಯವಸ್ಥೆ ಮಾಡುತ್ತದೆ.

Advertisement

ನಡೆಯೋ ಅಭ್ಯಾಸ
ನಡೆಯೋ ಅಭ್ಯಾಸ ಕಾಲಿನ ಸ್ನಾಯು, ಮಾಂಸಖಂಡಗಳನ್ನು ಬಲಗೊಳಿಸುವುದಲ್ಲದೇ, ಹೃದಯಕ್ಕೆ ರಕ್ತವನ್ನು ಪಂಪ್‌ ಮಾಡುವ ಹಾಗೆ ಮಾಡುತ್ತದೆ. ಬೆಳಗ್ಗಿನ ವೇಳೆ 15 ರಿಂದ 20 ನಿಮಿಷ ನಡೆಯುವುದು ಆರೋಗ್ಯಕ್ಕೆ ಉತ್ತಮ.

ಪಿಲಾಟಿಸ್‌ ವ್ಯಾಯಾಮ ಅಭ್ಯಾಸ
ಪಿಲಾಟಿಸ್‌ ಅನ್ನೋ ವ್ಯಾಯಾಮವನ್ನು ನೀವು ಕೇಳೇ ಇರುತ್ತೀರಿ. ಈ ವ್ಯಾಯಾಮ ಮಾಡುವುದಿರಿಂದ ನಿಮ್ಮ ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಜತೆಗೆ ಶ್ವಾಸಕೋಶಕ್ಕೂ ಸರಿಯಾಗಿ ಕೆಲಸ ಕೊಡುತ್ತದೆ.

ಪ್ಲಾಂಕ್‌
ಇದರಿಂದ ಉಸಿರಾಟದ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ ನೆಲದ ಮೇಲೆ ಮಲಗಿ ಎರಡೂ ಕೈಗಳನ್ನು ಮುಷ್ಟಿ ಕಟ್ಟಿ ಸ್ಪಿಂಕ್ಸ್‌ ತರ ಹಿಡಿದುಕೊಂಡು ಬಳಿಕ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳುತ್ತ ಇಡೀ ದೇಹವನ್ನು ನೆಲದಿಂದ ಮೇಲೆತ್ತಿ. ಬೆನ್ನು ಓರೆಯಾಗದ ರೀತಿ ನೋಡಿಕೊಳ್ಳಬೇಕು. ಇದೇ ಸ್ಥಿತಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಮಾಡಬೇಕು.

ನೀರಿಲ್ದೇ ಬೋಟಿಂಗ್‌
ಇದೊಂತರಹ‌ ನೀರಿಲ್ಲದೆ ಬೋಟಿಂಗ್‌ ಮಾಡಿದ ಹಾಗೇ ಈ ಶ್ವಾಸಕೋಶದ ವ್ಯಾಯಾಮಗಳು ಬೆನ್ನಿನ ಮೇಲ್ಗಡೆಯ ಲ್ಲಿರುವ ಮಾಂಸಖಂಡಗಳು ಮತ್ತು ಹೃದಯದ ಸ್ನಾಯುಗಳಿಗೆ ತುಂಬಾ ಸಹಾಯ ಮಾಡುತ್ತವೆ. ಇದಕ್ಕೆ ರೆಸಿಸ್ಟೆಂಟ್ ಬ್ಯಾಂಡನ್ನು ಮೊದಲು ನೆಲದ ಮೇಲೆ ಕಾಲ್ಚಾಚಿ ಕೂಳಿತುಕೊಂಡು, ಮಂಡಿಯನ್ನು ಸ್ವಲ್ಪ ಮಡಚಿಕೊಳ್ಳಿ. ಬ್ಯಾಂಡನ್ನು ಎಕ್ಸ್‌ ಆಕಾರದಲ್ಲಿ ಕಾಲಿಗೆ ಸುತ್ತಿಕೊಳ್ಳಿ.ಒಂದು ಕೈಯಲ್ಲಿ ಒಂದು ತುದಿಯನ್ನು ಇಟ್ಟುಕೊಳ್ಳಿ. ಎರಡು ಕೈಗಳನ್ನು ಹೊರಗಡೆ ಚಾಚಿಕೊಂಡು ನಿಧಾನವಾಗಿ ಕೈ ಎದೆಯ ಹತ್ತಿರಕ್ಕೆ ಬರುವ ತರ ಮಾಡಿ. ಇದೇ ತರ ಹತ್ತು ಸಲ ಮಾಡಿ. ಇದು ಬರೀ ಶ್ವಾಸಕೋಶವನ್ನು ಬಲಗೊಳಿಸುವುದಲ್ಲದೆ ಭುಜದ ಚಲನೆಯನ್ನು ಇನ್ನೂ ಜಾಸ್ತಿ ಮಾಡುತ್ತದೆ.

Advertisement

•ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next