Advertisement

ರಂಜಿಸಿದ ಕಸರತ್ತು ಪ್ರದರ್ಶನ ಸ್ಪರ್ಧೆ

03:07 PM Sep 11, 2017 | |

ಮುದ್ದೇಬಿಹಾಳ: ಪಟ್ಟಣದ ಮಹಿಬೂಬ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಕ್ರೀದ್‌ ಹಬ್ಬದ ನಿಮಿತ್ತ ಆಯೋಜಿಸಿದ್ದ ವಿವಿಧ ಕಸರತ್ತು ಪ್ರದರ್ಶಿಸುವ ಸ್ಪರ್ಧೆಗಳು ರವಿವಾರ ನಾಲತವಾಡ ರಸ್ತೆಯಲ್ಲಿ ಯಶಸ್ವಿಯಾಗಿ ನೆರವೇರಿದವು.

Advertisement

ಹೊಲದಲ್ಲಿ ಎತ್ತಿನಗಾಡಿ (ಚಕ್ಕಡಿ) ಓಡಿಸುವುದು, 1 ಕುದುರೆ ಮತ್ತು 1 ಎತ್ತು ನೊಗಕ್ಕೆ ಹೂಡಿದ ಗಾಡಿ ರೇಸ್‌, ಪುಟ್ಟಿಗಾಡಿ (ಸಣ್ಣ ಬಂಡಿ)ಯೊಂದಿಗೆ 4 ಕಿ.ಮೀ. ಹೋಗಿ ಬರುವುದು, ಭಾರವಾದ ಚೀಲ ಹೊತ್ತುಕೊಂಡು ಸಾಗ ಹೋಗುವುದು ಸೇರಿದಂತೆ ಹಲವು ಕಸರತ್ತಿನ ಸ್ಪರ್ಧೆಗಳನ್ನು ಸಂಘಟಕರು ಆಯೋಜಿಸಿದ್ದರು.

ವಿಜಯಪುರ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಸ್ಪರ್ಧಾಳುಗಳು ತಮ್ಮ ಎತ್ತು, ಕುದುರೆ, ಬಂಡಿ ಸಮೇತ ಪಾಲ್ಗೊಂಡಿದ್ದರು. ರೋಚಕೆಯಿಂದ ಕೂಡಿದ್ದ ಸ್ಪರ್ಧೆ ನೋಡಲು ನೂರಾರು ಕ್ರೀಡಾಭಿಮಾನಿಗಳು ಗಾಡಿ ಜೊತೆ ಓಡಿ ಹುರುಪು ತುಂಬಿದರು. 

ಹೊಲದಲ್ಲಿ ಎತ್ತಿನ ಗಾಡಿ ರೇಸ್‌ ಬಹುಮಾನವನ್ನು ಕಮಿಟಿ, ಹೆಸರು ಬಹಿರಂಗ ಪಡಿಸಲಿಚ್ಛಿಸದ ಗುಪ್ತ ದಾನಿ ಮತ್ತು ಸಿದ್ದಪ್ಪ ಚಟ್ಟೇರ, 1 ಕುದುರೆ 1 ಎತ್ತು ಗಾಡಿ ರೇಸ್‌ ಬಹುಮಾನವನ್ನು ಬಸಣ್ಣ ಕುಂಬಾರ, ದಾವಲಸಾಬ ಸಂಕನಾಳ ಮತ್ತು ಎಂ.ಕೆ. ಇಲೆಕ್ಟ್ರಾನಿಕ್ಸ್‌, ಪುಟ್ಟಿ ಎತ್ತಿನ ಗಾಡಿ ರೇಸ್‌ನ ಎಲ್ಲ ಬಹುಮಾನಗಳನ್ನು ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಭಾರವಾದ ಚೀಲ ಹೊತ್ತುಕೊಂಡು ಸಾಗ ಹೋಗುವ ಸ್ಪರ್ಧೆಯ ಬಹುಮಾನಗಳನ್ನು ಮಹಾಂತೇಶ ಕಿತ್ತೂರ, ದೇವಪ್ಪ ತಟ್ಟಿ ಮತ್ತು ಕಮೀಟಿಯವರು ಪ್ರಾಯೋಜಿಸಿದ್ದರು.

ಶಾಸಕ ನಡಹಳ್ಳಿ ಪರವಾಗಿ ಜಿಪಂ ಸದಸ್ಯ ಬಸನಗೌಡ ವಣಿಕ್ಯಾಳ ಪುಟ್ಟಿ ಎತ್ತಿನ ಗಾರಿ ರೇಸ್‌ ಅನ್ನು ರಿಬ್ಬನ್‌ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜೆಡಿಎಸ್‌ ತಾಲೂಕಾಧ್ಯಕ್ಷ ಈರಸಂಗಪ್ಪಗೌಡ ಪಾಟೀಲ, ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ಬಾಬು ಜಾನ್ವೇಕರ್‌, ರಾಜು ಹೊನ್ನುಟಗಿ, ಜೆಡಿಎಸ್‌ನ ಜಿಲ್ಲಾ ಮುಖಂಡ ರಸೂಲ್‌ ದೇಸಾಯಿ, ಗಣ್ಯರಾದ
ಶಾಂತಗೌಡ ಮಂಗ್ಯಾಳ, ಸೋಮನಗೌಡ ಪಾಟೀಲ ನಡಹಳ್ಳಿ, ಬಸಣ್ಣ ಕುಂಬಾರ, ದಾವಲಸಾಬ ಸಂಕನಾಳ, ಪದಮಣ್ಣ ನಾಯಕ್‌, ಕಾಮರಾಜ ಬಿರಾದಾರ, ಅಶೋಕ ಚಟ್ಟೇರ, ಮಲ್ಲು ಅಪರಾ , ಅಲ್ಲಾಭಕ್ಷ ಢವಳಗಿ, ನಬೀಲಾಲ ದೇಸಾಯಿ ಸೇರಿದಂತೆ ಹಲವರು ಇದ್ದರು. ಸ್ಪರ್ಧೆಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆಯಾ ಸ್ಪರ್ಧೆ ಪ್ರಾರಂಭಗೊಳ್ಳುವುದಕ್ಕೂ ಒಂದು ಗಂಟೆ ಮೊದಲು ಹೆಸರು ನೋಂದಾಯಿಸಲು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರತಿಯೊಂದು ಸ್ಪರ್ಧೆಯಲ್ಲಿ 10ರಿಂದ 15 ಸ್ಪರ್ಧಿಗಳು ಪಾಲ್ಗೊಂಡಿದ್ದರು.

Advertisement

„ವಿಜೇತರು: ಪುಟ್ಟಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮುದ್ದೇಬಿಹಾಳದ ಸಾಹೇಬಲಾಲ ದೇಸಾಯಿ, ದ್ವಿತೀಯ ಸ್ಥಾನ ತೆಲಸಂದ ಸಿದ್ರಾಯ ರಟ್ಕಲ್‌, ತೃತೀಯ ಸ್ಥಾನವನ್ನು ಅಥಣಿಯ ಹೂವಣ್ಣ ಶಂಕ್ರಣ್ಣ, ಚತುರ್ಥ ಸ್ಥಾನವನ್ನು ಕುಂಟೋಜಿಯ ರುದ್ರಯ್ಯ ಹಿರೇಮಠ ಪಡೆದರು.

ಹೊಲಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಲ್ಲಪ್ಪ ಶಿರೋಳ, ದ್ವಿತೀಯ ಸ್ಥಾನವನ್ನು ಗುರುಪಾದಪ್ಪ ಯತ್ನಾಳ, ತೃತೀಯ ಸ್ಥಾನವನ್ನು ರವಿಕುಮಾರ ಕೊಟಗೊಂಡ, 1 ಕುದುರೆ 1 ಎತ್ತು ಗಾಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹೆಬ್ಬೂರದ ಸಂಜುಮೂರ್ತಿ, ದ್ವಿತೀಯ ಸ್ಥಾನವನ್ನು ಕಾಶಿನಕುಂಟಿಯ ದುರ್ಗಾದೇವಿ ತಂಡ, ತೃತೀಯ ಸ್ಥಾನವನ್ನು ಮುದ್ದೇಬಿಹಾಳದ ಶಬ್ಬೀರ್‌ ನಾಯೋಡಿ ಪಡೆದುಕೊಂಡರು. ವಿಜೇತರೆಲ್ಲರಿಗೂ ಕಮಿಟಿ ನಿಗದಿಪಡಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಸಾಹೇಬಲಾಲ ದೇಸಾಯಿ, ಮಲ್ಲಪ್ಪ ಕುಂಬಾರ, ಬಾಷಾಸಾಬ ಸಂಕನಾಳ, ಮಲ್ಲಪ್ಪ ದೊಡಮನಿ, ಬಸೀರ್‌ ಬಾವೂರ, ಬಾಬುಲಾಲ ಸಂಕನಾಳ, ಮೈಬೂಬ ನಾಯೋಡಿ, ಲಾಳೇಮಶ್ಯಾಕ
ಉಣ್ಣಿಭಾವಿ, ಬುಡ್ಡೇಸಾಬ ಮಕ್ಕಾಬಾಯಿ, ಈರಪ್ಪ ಪವಾಡಶೆಟ್ಟಿ, ಪಾವಡೆಪ್ಪ ನಡಗೇರಿ, ರಾಚಯ್ಯ ಶಿವಯೋಗಿಮಠ, ಮಹ್ಮದ್‌ಯುಸೂಫ್‌ ನಾಯೋಡಿ ಇನ್ನಿತರರು ಎಲ್ಲ ಸ್ಪರ್ಧೆಗಳು ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next