Advertisement

ಸರ್ಕಾರಿ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಪಾವತಿಸುವ  ಶುಲ್ಕಕ್ಕೆ ವಿನಾಯಿತಿ

12:33 AM Jun 30, 2022 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿನಿಯರಿಗೆ ಸರಕಾರ ನೀಡುವ 456 ರೂ.ಗಳ ವಿವಿಧ ಶುಲ್ಕ ವಿನಾಯಿತಿಯ ಮೊತ್ತವನ್ನು ಇನ್ಮುಂದೆ ಪ್ರವೇಶ ಪ್ರಕ್ರಿಯೆ ಸಮಯದಲ್ಲೇ ಆಯಾ ಕಾಲೇಜುಗಳ ಪ್ರಾಂಶುಪಾಲರ ಖಾತೆಗೆ ಜಮೆ ಮಾಡುವಂತೆ ಪಿಯು ಇಲಾಖೆ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚಿಸಿದೆ.

Advertisement

ಕಾಲೇಜು ಶಿಕ್ಷಣದಲ್ಲಿ ಹೆಣ್ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರಕಾರಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ಹೆಣ್ಣು ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ ಶುಲ್ಕ ಸಹಿತ ಸುಮಾರು ಐದು ರೀತಿಯ ಶುಲ್ಕಗಳಿಗೆ 2019-20ನೇ ಸಾಲಿನಿಂದ ವಿನಾಯಿತಿ ನೀಡಿದೆ.

ಇದರಿಂದ ಹೆಣ್ಮಕ್ಕಳು ಪ್ರವೇಶ ಸಂದರ್ಭದಲ್ಲಿ 255 ರೂ. ಮಾತ್ರ ಪಾವತಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next