Advertisement

ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರು FIR ಆದೇಶ ನೀಡುವಂತಿಲ್ಲ: ಸುಪ್ರೀಂ

04:57 PM Dec 19, 2018 | Team Udayavani |

ಹೊಸದಿಲ್ಲಿ : ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ ನಲ್ಲಿ ಸ್ಪಷ್ಟಪಡಿಸಲಾಗಿರುವ ಪ್ರಕಾರ ಕಾರ್ಯನಿರ್ವಾಹಕರು ಮ್ಯಾಜಿಸ್ಟ್ರೇಟರು ತಮ್ಮಲ್ಲಿ ದಾಖಲಿಸಲ್ಪಟ್ಟ ಖಾಸಗಿ ದೂರಿನ ಆಧಾರದಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

Advertisement

ಒಂದು ವೇಳೆ ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟರು ತಮ್ಮಲ್ಲಿ ದಾಖಲಾದ ಖಾಸಗಿ ದೂರನ್ನು ಇತ್ಯರ್ಥಪಡಿಸುವ ನ್ಯಾಯಾಂಗ ವ್ಯಾಪ್ತಿಯನ್ನು ಹೊಂದಿದಲ್ಲಿ, ಆಡಳಿತಾತ್ಮಕ ತನಿಖೆಯನ್ನು ಕೈಗೊಂಡ ಬಳಿಕ, ತಾವೇ ಎಫ್ಐಆರ್‌ ದಾಖಲಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು. 

ಉಪ ವಿಭಾಗೀಯ ಮ್ಯಾಜಿಸ್ಟ್ರೇಟರ ನಿರ್ದೇಶನದ ಪ್ರಕಾರ ಖಾಸಗಿ ಕಾಲೇಜೊಂದರ ವಿರುದ್ಧ  ದಾಖಲಾಗಿದ್ದ ಎಫ್ಐಆರ್‌ ಅನ್ನು ರದ್ದು ಮಾಡಲು ನಿರಾಕರಿಸಿದ್ದ ಅಲಹಾಬಾದ್‌ ಹೈಕೋರ್ಟಿನ ಲಕ್ನೋ ಪೀಠದ ಆದೇಶವನ್ನು ಜಸ್ಟಿಸ್‌ಗಳಾದ ಆರ್‌ ಎಫ್ ನಾರಿಮನ್‌ ಮತ್ತು  ನವೀನ್‌ ಸಿನ್ಹಾ ಅವರನ್ನು ಒಳಗೊಂಡ ಪೀಠವು ವಜಾ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next