Advertisement

US: ಅಮೆರಿಕದಲ್ಲಿ ನೈಟ್ರೋಜನ್‌ ಬಳಸಿ 22 ನಿಮಿಷಗಳಲ್ಲಿ ಗಲ್ಲು ಶಿಕ್ಷೆ ಜಾರಿ

10:29 PM Jan 26, 2024 | Team Udayavani |

ಅಟ್ಮೋರ್‌: ಮೂವತ್ತು ವರ್ಷಗಳ ಹಿಂದೆ ಅಮೆರಿಕದ ಅಲಬಾಮಾದಲ್ಲಿ ಮಹಿಳೆಯನ್ನು ಕೊಲ್ಲಲು ಸಾವಿರ ಡಾಲರ್‌ ರೂ.ಗಳನ್ನು ಪಾವತಿಸಿದ್ದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ನೈಟ್ರೋಜನ್‌ ಅನಿಲವನ್ನು ಬಳಸಿ ಆತನ ಉಸಿರುಕಟ್ಟಿಸಿ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಈ ಕ್ರಮದಲ್ಲಿ ಮರಣ ದಂಡನೆ ಜಾರಿಗೊಳಿಸಲಾಗಿದೆ.

Advertisement

ಶಿಕ್ಷೆಗೆ ಗುರಿಯಾಗಿದ್ದ ಕೆನೆಥ್‌ ಯುಜೀನ್‌ ಸ್ಮಿತ್‌(58)ನಿಗೆ ಗುರುವಾರ ಅಲಬಾಮಾ ಜೈಲಿನಲ್ಲಿ ಫೇಸ್‌ ಮಾಸ್ಕ್ನ ಮೂಲಕ ನೈಟ್ರೋಜನ್‌ ಗ್ಯಾಸ್‌ ನೀಡಲಾಗಿದ್ದು, 22 ನಿಮಿಷಗಳ ಬಳಿಕ ಆತ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ. ಅನಂತರ ಬೆಳಗ್ಗೆ 8.25ರ ವೇಳೆಗೆ ಆತ ಸಾವನ್ನಪ್ಪಿರುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಅಮೆರಿಕದಲ್ಲಿ 1982ರ ಬಳಿಕ ಇದೇ ಮೊದಲ ಬಾರಿಗೆ ಮರಣದಂಡನೆ ಶಿಕ್ಷೆ ಜಾರಿಗೆ ಈ ಹೊಸ ವಿಧಾನವನ್ನು ಬಳಸಲಾಗಿದೆ. ಈ ಮೊದಲು ವಿಷಕಾರಿ ಚುಚ್ಚುಮದ್ದುಗಳನ್ನು ನೀಡಿ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತಿತ್ತು. 1988ರಲ್ಲಿ ಎಲಿಜಬೆತ್‌ ಸೆನೆಟ್‌ ಎನ್ನುವ 45 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದಕ್ಕಾಗಿ ನೀಡಿದ ಈ ಶಿಕ್ಷೆ ನ್ಯಾಯಯುತವಾಗಿದೆ ಎಂದು ಅಲಬಾಮಾ ಸರ್ಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next