Advertisement

MUDA ಹಗರಣ ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಸಿಎಂಗೆ ಸಿ.ಟಿ. ರವಿ ಪತ್ರ

12:31 AM Jul 31, 2024 | Team Udayavani |

ಚಿಕ್ಕಮಗಳೂರು: ಮುಡಾ ನಿವೇಶನ ಹಗರಣ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

Advertisement

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇರುವ ಆಡಳಿತ ಪಕ್ಷ, ವಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಉತ್ತರಿಸುವ ಅತ್ಯುನ್ನತ ವೇದಿಕೆ ವಿಧಾನ ಮಂಡಲವಾಗಿದ್ದು, ಅಲ್ಲಿ ಪ್ರಶ್ನಿಸಲು, ಆರೋಪಿಸಲು ಅವಕಾಶ ನೀಡದೆ ಸದನದ ಹೊರಗೆ ಮುಡಾ ನಿವೇಶನ ಹಗರಣಕ್ಕೆ ಸಂಬಂ ಧಿಸಿದಂತೆ ಮತ್ತು ತಮ್ಮ ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಅರ್ಧ ಸತ್ಯ ಮಾತ್ರ ಹೇಳಿರುವ ತಾವು, ಪೂರ್ಣ ಸತ್ಯವನ್ನು ತೆರೆದಿಡುವಂತೆ ಒತ್ತಾಯಿಸಿ ಬಹಿರಂಗವಾಗಿ ಪತ್ರ ಬರೆಯುತ್ತಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next