Advertisement

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

01:26 AM Dec 27, 2024 | Team Udayavani |

ಹೊಸದಿಲ್ಲಿ: ಕಜಕಿಸ್ಥಾನದಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡುವಾಗ ಹೊತ್ತಿ ಉರಿದ ಅಜರ್ಬೈಜಾನ್‌ ಏರ್‌ಲೈನ್ಸ್‌ನ ವಿಮಾನಕ್ಕೆ ಆಕಸ್ಮಿಕವಾಗಿ ರಷ್ಯಾದ ಕ್ಷಿಪಣಿ ಹೊಡೆದಿರಬಹುದು ಎನ್ನಲಾಗಿದೆ.

Advertisement

ಈ ಬಗ್ಗೆ ರಕ್ಷಣ ತಜ್ಞರ ಹೇಳಿಕೆಯನ್ನುಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಅಪಘಾತದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ವೀಡಿಯೋವೊಂದರ ಪ್ರಕಾರ ವಿಮಾನದಲ್ಲಿ ಹಲವು ರಂಧ್ರಗಳಾಗಿರುವುದು ಕಂಡುಬಂದಿದೆ. ವಿಮಾನ ಹಾರುತ್ತಿದ್ದ ಪ್ರದೇಶದಲ್ಲಿ ಉಕ್ರೇನ್‌ ಡ್ರೋನ್‌ಗಳೂ ಇದ್ದವು ಎನ್ನಲಾಗಿದೆ. ಬುಧವಾರ ನಡೆದಿದ್ದ ದುರಂತದಲ್ಲಿ 38 ಮಂದಿ ಅಸುನೀಗಿದ್ದರು. ಈ ದುರಂತದಲ್ಲಿ 29 ಮಂದಿ ಪವಾಡ ಸದೃಶವಾಗಿ ಪಾರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next