Advertisement
ದೇಶದ ಪ್ರಗತಿ ಜತೆಗೆ ಆರ್ಥಿಕತೆಗೆ ಬೆಳವಣಿಗೆ ಸಾರಿಗೆ- ಸಂಪರ್ಕ ಮೂಲ ಸೌಕರ್ಯ ಅಭಿವೃದ್ಧಿಯ ಮಹತ್ವವನ್ನು ಮನಗಂಡಿರುವ ಕೇಂದ್ರ ಸರ್ಕಾರ ಈ ಬಾರಿ ರಸ್ತೆ, ರೈಲು ಹಾಗೂ ಬಂದರು ಸಂಪರ್ಕ ಜಾಲ ನಿರ್ಮಾಣ, ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಘೋಷಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣಕ್ಕಾಗಿ 1.18 ಲಕ್ಷ ಕೋಟಿ ರೂ. ಅನುದಾನ ಕಾಯ್ದಿರಿಸುವ ಮೂಲಕ ಇತಿಹಾಸದಲ್ಲೇ ಅತಿ ಹೆಚ್ಚು ಹಣ ಮೀಸಲಿಟ್ಟಂತಾಗಿದೆ.
Related Articles
Advertisement
ನೆರೆಯ ಕೇರಳ ರಾಜ್ಯದಲ್ಲಿ ಮುಂಬೈ- ಕನ್ಯಾಕುಮಾರಿ ಕಾರಿಡಾರ್‌ನಡಿ 600 ಕಿ.ಮೀ. ಉದ್ದದ ಹೆದ್ದಾರಿ ಸೇರಿದಂತೆ ಒಟ್ಟು 65,000 ಕೋಟಿ ರೂ. ವೆಚ್ಚದಲ್ಲಿ 1,100 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ. ಪಶ್ಚಿಮ ಬಂಗಾಳದಲ್ಲಿ ಕೊಲ್ಕತ್ತಾ- ಸಿಲಿಗುರಿ ಹೆದ್ದಾರಿ ಮೇಲ್ದರ್ಜೆ ಕಾಮಗಾರಿ ಸೇರಿದಂತೆ 675 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕಾಗಿ 25,000 ಕೋಟಿ ರೂ. ಅನುದಾನ ಘೋಷಿಸ ಲಾಗಿದೆ. ಅಸ್ಸಾಂನಲ್ಲಿ ಪ್ರಗತಿ ಯಲ್ಲಿರುವ ಹೆದ್ದಾರಿ ಕಾಮಗಾರಿ ಗಳಿಗೆ 19,000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 1,300 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು 34,000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಭರವಸೆ ನೀಡಲಾಗಿದೆ.
2021-22ರಲ್ಲಿ ಕಾಮಗಾರಿಗೆ ಚಾಲನೆ– ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ವೇ: 260 ಕಿ.ಮೀ. ಉದ್ದದ ಕಾಮಗಾರಿಗೆ ಎರಡು ತಿಂಗಳಲ್ಲಿ ಮಂಜೂರಾತಿ
– ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ: 278 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಚಾಲನೆ
– ದೆಹಲಿ- ಡೆಹ್ರಡೂನ್ ಎಕನಾಮಿಕ್ ಕಾರಿಡಾರ್: 210 ಕಿ.ಮೀ. ಉದ್ದದ ಕಾರಿಡಾರ್‌ಗೆ ಹಸಿರು ನಿಶಾನೆ
– ಕಾನ್ಪುರ- ಲಕ್ನೋ ಎಕ್ಸ್‌ಪ್ರೆಸ್ ವೇ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 27ಕ್ಕೆ ಪರ್ಯಾಯವಾಗಿ 63 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ನಿರ್ಮಾಣ ಕಾರ್ಯ ಚಾಲನೆ
– ಚೆನ್ನೆ- ಸೇಲಂ ಕಾರಿಡಾರ್: 277 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಮಾರ್ಗಕ್ಕೆ ಮಂಜೂರಾತಿ- ನಿರ್ಮಾಣಕ್ಕೆ ಚಾಲನೆ
– ರಾಯಪುರ- ವಿಶಾಖಪಟ್ಟಣಂ: ಛತ್ತೀಸ್‌ಗಡ, ಒಡಿಶಾ ಹಾಗೂ ಉತ್ತಮ ಆಂಧ್ರ ಪ್ರದೇಶದಲ್ಲಿ ಹಾದು ಹೋಗುವ 464 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಕಾರ್ಯಾರಂಭ.