Advertisement
ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಬಿಲ್ ಗುಟ್ಟೆಂಟಾಗ್ ನಿರ್ದೇಶಿಸಲಿರುವ, “ಅಫ್ಘಾನ್ ಡ್ರೀಮರ್ಸ್” 2017 ರಲ್ಲಿ ಯುವತಿಯರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಮಾರ್ಗವಾಗಿ ಆಫ್ಘನ್ ಟೆಕ್ ಉದ್ಯಮಿ ರೋಯಾ ಮಹಬೂಬ್ ಅವರು ತಂತ್ರಜ್ಞಾನ, ಪಿತೃಪ್ರಧಾನ ಸಮಾಜದ ಹೊರತಾಗಿಯೂ ಪ್ರಾರಂಭಿಸಿದ ಕಾರ್ಯಕ್ರಮದ ನೈಜ ಕಥೆಯಾಗಿದೆ.
Related Articles
Advertisement
“ದಿ ಬೋಲ್ಡ್ ಟೈಪ್” ಸರಣಿಗೆ ಹೆಸರುವಾಸಿಯಾದ ನಟ ನಿಕೋಲ್ ಬೂಶೇರಿ ಈ ಚಿತ್ರದಲ್ಲಿ ರೋಯಾ ಮಹಬೂಬ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಫಜಲ್ ಪಾತ್ರದ ಬಗ್ಗೆ ವಿವರಗಳನ್ನು ಗೌಪ್ಯವಾಗಿಡಲಾಗಿದೆ.
“ಅಫ್ಘಾನ್ ಡ್ರೀಮರ್ಸ್” ಚಿತ್ರೀಕರಣ ಇತ್ತೀಚೆಗೆ ಮೊರಾಕೊದಲ್ಲಿ ಪ್ರಾರಂಭವಾಯಿತು ಮತ್ತು ಇದು 50 ದಿನಗಳ ಕಾಲ ನಡೆಯಲಿದ್ದು, ಚಿತ್ರದ ಬಹುಪಾಲು ಚಿತ್ರೀಕರಣ ಮೊರಾಕೊ ಮತ್ತು ಬುಡಾಪೆಸ್ಟ್‌ನಲ್ಲಿ ನಡೆಯಲಿದೆ.
36 ರ ಹರೆಯದ ಭಾರತದ ಪ್ರತಿಭಾನ್ವಿತ ಯುವ ನಟ, ಮಾಡೆಲ್ ಫಜಲ್ ಅವರು 3 ಈಡಿಯಟ್ಸ್ ನಲ್ಲಿ (2009) ನಲ್ಲಿ ಅತಿಥಿ ಪಾತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಮೆರಿಕನ್ ಟಿವಿ ಕಿರುಸರಣಿ ಬಾಲಿವುಡ್ ಹೀರೋನಲ್ಲಿ ಕಾಣಿಸಿಕೊಳ್ಳುವ ಮೊದಲು ಇಂಗ್ಲಿಷ್ ಭಾಷೆಯ ಚಲನಚಿತ್ರ ”ದಿ ಅದರ್ ಎಂಡ್ ಆಫ್ ದಿ ಲೈನ್”ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ”ಆಲ್ವೇಸ್ ಕಭಿ ಕಭಿ” (2011), ”ಬಾತ್ ಬಾನ್ ಗಯಿ” (2013) ಮತ್ತು ಬಾಬಿ ಜಾಸೂಸ್ (2014) ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಮೊದಲ ಯಶಸ್ಸು ಫುಕ್ರೆ (2013) ಮತ್ತು ಸೋನಾಲಿ ಕೇಬಲ್ (2014) ಮೂಲಕ ದೊರಕಿತು.
ಆಲ್ವೇಸ್ ಕಭಿ ಕಭಿ (2011) ನಲ್ಲಿ ಕಾಣಿಸಿಕೊಂಡರು. ಭಯಾನಕ ಚಲನಚಿತ್ರ ಖಾಮೋಶಿಯಾನ್ (2015) ನಂತರ ಅವರ ಮೊದಲ ಅಮೆರಿಕನ್ ಚಲನಚಿತ್ರ ಫ್ಯೂರಿಯಸ್ 7 (2015), ಮತ್ತು 2016 ರಲ್ಲಿ ಡಯಾನಾ ಪೆಂಟಿ ಎದುರು ”ಹ್ಯಾಪಿ ಭಾಗ್ ಜಾಯೇಗಿ” ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಫಜಲ್ ಬ್ರಿಟಿಷ್-ಅಮೆರಿಕನ್ ಚಲನಚಿತ್ರ ವಿಕ್ಟೋರಿಯಾ & ಅಬ್ದುಲ್ ನಲ್ಲಿ ನಟಿಸಿದರು. ರಾಣಿ ವಿಕ್ಟೋರಿಯಾ (ಜೂಡಿ ಡೆಂಚ್) ಮತ್ತು ಆಕೆಯ ಆಪ್ತ ಭಾರತೀಯ ಸೇವಕ ಅಬ್ದುಲ್ ಕರೀಮ್ (ಫಜಲ್) ಸಂಬಂಧದ ಕುರಿತಾಗಿನ ಚಿತ್ರ ಇದಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋದ ಕ್ರೈಮ್ ಥ್ರಿಲ್ಲರ್ ”ಮಿರ್ಜಾಪುರ್”ನಲ್ಲಿ ಗುಡ್ಡು ಪಂಡಿತ್ ಪಾತ್ರವನ್ನು ನಿರ್ವಹಿಸಿ ಫಜಲ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ವಿಷ್ಣುದಾಸ್ ಪಾಟೀಲ್