ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಶನಿವಾರ (ಜೂನ್ 29) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal)ಗೆ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಇದನ್ನೂ ಓದಿ:Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..
ಕೇಜ್ರಿವಾಲ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದ ವೇಳೆ, ಅರವಿಂದ್ ಕೇಜ್ರಿವಾಲ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿದ್ದು, ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.
ಮೂರು ದಿನಗಳ ಕಸ್ಟಡಿ ಮುಕ್ತಾಯಗೊಂಡಿದ್ದರಿಂದ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಕೋರ್ಟ್ ಗೆ ಕರೆತಂದಿದ್ದು, ಸಿಬಿಐ ಮನವಿ ಬಗ್ಗೆ ವಿಶೇಷ ನ್ಯಾಯಾಧೀಶೆ ಸುನೇನಾ ಶರ್ಮಾ ಆದೇಶ ಕಾಯ್ದಿರಿಸಿ, ಸಂಜೆ ಪ್ರಕಟಿಸಿದ್ದರು.
2021-2022ರ ಅಬಕಾರಿ ನೀತಿ ಪ್ರಕಾರ ರಖಂ ಮಾರಾಟಗಾರರ ಲಾಭಾಂಶ ಶೇ.5ರಿಂದ ಶೇ.12ರಷ್ಟು ಹೇಗೆ ಏರಿಕೆಯಾಗುತ್ತದೆ ಎಂಬ ಬಗ್ಗೆ ಕೇಜ್ರಿವಾಲ್ ಸಮರ್ಪಕ ವಿವರಣೆ ನೀಡಿಲ್ಲ ಎಂದು ಸಿಬಿಐ ಆರೋಪಿಸಿದೆ.