Advertisement

ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿಎಕ್ಸ್‌ಲೆಂಟ್‌ ಸಾಧನೆ

11:30 AM Aug 19, 2018 | |

ವಿಜಯಪುರ: ಅಖೀಲ ಭಾರತೀಯ ಕ್ರೀಡಾ ಒಕ್ಕೂಟದಿಂದ ವಿಜಯವಾಡದಲ್ಲಿ ಜರುಗಿದ 4ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ನಗರದ ಎಕ್ಸ್‌ಲೆಂಟ್‌ ಇಂಗ್ಲಿಷ್‌ ಮಾಧ್ಯಮದ 12 ಕರ್ನಾಟಕ ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ತಂಡ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದೆ.

Advertisement

ಟೆಕ್ವಾಂಡೋ ವಿಭಾಗದಲ್ಲಿ 25ಕೆ.ಜಿ ಒಳಗಡೆ, ನಿಜಗುಣಿ ಪಾಟೀಲ ಬೆಳ್ಳಿ ಪದಕ, 32ಕೆ,ಜಿ ಒಳಗಡೆ ಸುಶೀಲಕುಮಾರ್‌ ರಾಮಗೋಂಡ ಬಂಗಾರ ಪದಕ, ಶ್ರೆಯಸ್‌ ಬೇವನೂರ ಬೆಳ್ಳಿ ಪದಕ, ಶಾಮವೀರ ದೇಶಮುಖ ಕಂಚಿನ ಪದಕ, 36ಕೆ.ಜಿ ಒಳಗಡೆ ಮಹೇಶ ಗುತ್ತೇದಾರ ಬಂಗಾರ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಸುದರ್ಶನ ಜುಮನಾಳ ಬೆಳ್ಳಿ ಪದಕ, ನಚಿಕೇತಯಡಹಳ್ಳಿ ಕಂಚಿನ ಪದಕ ಪಡೆದಿದ್ದಾರೆ. 52 ಕೆ.ಜಿ ವಿಭಾಗದಲ್ಲಿ ವೃಷಭ ಬಿ. ಕದಂ ಕಂಚಿನ ಪದಕ, ಅಥ್ಲೆಟಿಕ್‌ ವಿಭಾಗದ 200ಮೀ. ಓಟದಲ್ಲಿ ಮೊಹ್ಮದ್‌ ಡಿ. ಗೌಸ್‌ ಶೇಖ್‌ ಕಂಚಿನ ಪದಕ, ರಾಜು ಡಿ. ಕುಸ್ತಿ, 57 ಕೆಜಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 

ಕ್ರಿಕೆಟ್‌ ವಿಭಾಗದಲ್ಲಿ 16 ವರ್ಷದೊಳಗಿನ ಅಭಿಲಾಷ ಕೊಪ್ಪದ ತೃತೀಯ ಸ್ಥಾನ ಪಡೆದಿದ್ದಾರೆ. ಮಹೇಶ ಗುತ್ತೇದಾರ, ಶಶಿಧರ ಕಲ್ಲೂರ, ಆದಿತ್ಯ ಬೆಟಿಗೇರ, ಸೋಮನಾಥ ಪಾಟೀಲ, ವೃಷಭ ಕದಂ, ಅಭಿಷೇಕ ಮಾಗಣಗೇರಿ ಇತರರು ವಿವಿಧ ಕ್ರೀಡೆಯಲ್ಲಿ ಭಾಗಿಯಾಗಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ವಿಜೇತರಾಗಿರುವ ವಿದ್ಯಾರ್ಥಿಗಳ ತಂಡಕ್ಕೆ ಎಕ್ಸ್‌ಲೆಂಟ್‌ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ, ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದ ಕೇಲೂರ ಹಾಗೂ ನಿರ್ದೇಶಕರಾದ ಮಂಜುನಾಥ ಕವಲಗಿ, ದಯಾನಂದ ಕೇಲೂರ, ರಾಜಶೇಖರ ಕವಲಗಿ, ಎನ್‌.ಜಿ. ಯರನಾಳ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರದ 7 ಜನಕ್ಕೆ ರಾಷ್ಟ್ರೀಯ ನ್ಪೋರ್ಟ್ಸ್ ಅವಾರ್ಡ್‌ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಬಸವರಾಜ ಬಾಗೇವಾಡಿಯವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next