ಬೆಂಗಳೂರು: ಪ್ರತಿಷ್ಠಿತ ನ್ಯಾಷನಲ್ ಎಲಿಜಿಬಿಲಿಟಿ ಕಮ್‌ಎಂಟ್ರೆನ್ಸ್ ಟೆಸ್ಟ್ (NEET)ಗೆ ಯಶಸ್ವಿ ತರಬೇತಿ ನೀಡುತ್ತಿರುವ ಪ್ರಸಿದ್ಧ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ತನ್ನ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಯಲಹಂಕ ಉಪನಗರದ ಶೇಷಾದ್ರಿಪುರಂ ಕಾಲೇಜು ಸಮೀಪದ ಎಕ್ಸೆಲ್ ಅಕಾಡೆಮಿಕ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯುತ್ತಮ ತರಬೇತಿ ಕೇಂದ್ರವಾಗಿದ್ದು, ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಕೋಚಿಂಗ್ ಸೆಂಟರ್ ಎನಿಸಿದೆ.
ನೀಟ್‌ನಲ್ಲಿ ಅತ್ಯುನ್ನತ ರ್‍ಯಾಂಕುಗಳನ್ನು ಪಡೆವ ಮೂಲಕ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ ಹಾಗೂ ಬೇಡಿಕೆಗೆ ಅನುಗುಣವಾಗಿ ಹೊಸ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡಿದೆ. “ಎಕ್ಸೆಲ್ ಅಂದರೆ ಮೆಡಿಕಲ್, ಮೆಡಿಕಲ್ ಅಂದರೆ ಎಕ್ಸೆಲ್’ ಎನ್ನುವಂತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಾ ಇತಿಹಾಸ ಸೃಷ್ಟಿ ಮಾಡುವುದು ನಮ್ಮ ಮುಖ್ಯ ಗುರಿ ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಸೋಮಣ್ಣ (ಎಸ್‌ಎಸ್) ತಿಳಿಸಿದ್ದಾರೆ.
ಮೆಡಿಕಲ್ ವಿದ್ಯಾರ್ಥಿಗಳ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ನೀಟ್‌ನೊಂದಿಗೆ, ಐಐಟಿ, ಜೆಇಇ ಮೇನ್ ಮತ್ತು ಅಡ್ವಾನ್ಸಡ್, ಎಐಐಎಂಎಸ್, ಜೆಐಪಿಎಂಇಆರ್, ಸಿಇಟಿ, ಕಾಮೆಡ್-ಕೆ, ಬಿಟ್ಸ್, ವಿಐಟಿ, ಮಾಹೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಪ್ರಸಕ್ತ ವರ್ಷದಲ್ಲಿ 1050 ವಿದ್ಯಾರ್ಥಿಗಳಲ್ಲಿ 700ಕ್ಕಿಂತ ಅಧಿಕ ವಿದ್ಯಾರ್ಥಿಗಳು ಮೆಡಿಕಲ್ ಸೀಟುಗಳನ್ನು ಪಡೆದು ಶೇಕಡವಾರು ಪ್ರಮಾಣದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಬದಲಾಗುತ್ತಿರುವ ಪರೀಕ್ಷೆಯ ವ್ಯವಸ್ಥೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ ಆನ್‌ಲೈನ್ ಪರೀಕ್ಷೆಯ ಅಭ್ಯಾಸ ಮಾಡಿಸುತ್ತಿರುವ ಎಕ್ಸೆಲ್ ಅಕಾಡೆಮಿಕ್ಸ್‌ನಲ್ಲಿ ಮುಂದಿನ ದಿನಗಳಲ್ಲಿ ಓ.ಎಂ.ಆರ್.ಶೀಟ್ ಬದಲಿಗೆ ಆನ್‌ಲೈನ್ ಪರೀಕ್ಷೆಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದರ ಜತೆ ಪರೀಕ್ಷೆ ಬರೆಯುವ ವಿಧಾನ ಹಾಗೂ ಸಮಯದ ಸದ್ಬಳಕೆಯನ್ನು ಹೇಳಿಕೊಡಲಾಗುತ್ತದೆ.
ಜು.15ರಿಂದ ನೋಂದಣಿ ಆರಂಭ: ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ಮೊದಲ ವರ್ಷದ ಪ್ರವೇಶಕ್ಕೆ ಸೇರ ಬಯಸುವ ಹೊಸ ಬ್ಯಾಚ್ ವಿದ್ಯಾರ್ಥಿಗಳಿಗೆ ಜು.15 ರಿಂದ ನೋಂದಣಿ ಆರಂಭವಾಗಿದೆ. ದ್ವಿತೀಯ ಪಿಯು ಅಥವಾ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಹಾಗೂ ಪಿಸಿಬಿ/ಪಿಸಿಎಂ ಡ್ರಾಪರ್ ಕೋರ್ಸ್ ಬಗೆಗಿನ ಮಾಹಿತಿಗೆ ಮೊ. 7676917777, 9900836461 ಮತ್ತು 9036357499 ಸಂಪರ್ಕಿಸಬಹುದು. ಹೊರ ರಾಜ್ಯಗಳಿಂದ ತರಬೇತಿಗೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸುವ್ಯವಸ್ಥಿತ ಹಾಸ್ಟೆಲ್ ವ್ಯವಸ್ಥೆಯನ್ನು ಸಂಸ್ಥೆ ಒದಗಿಸಿದೆ.