ಕೇಂದ್ರ ಸರಕಾರ ರಕ್ಷಣಾ ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ 500 ಕೋಟಿ ರೂ. ತುರ್ತು ನಿಧಿ ಅಡಿಯಲ್ಲಿ ಈ ಮದ್ದುಗುಂಡುಗಳ ಖರೀದಿ ನಡೆಯಲಿದೆ.
Advertisement
ಎಕ್ಸ್‌ಕ್ಯಾಲಿಬರ್ ವಿಶೇಷವೇನು?: ಅತ್ಯಂತ ಉತ್ಕೃಷ್ಟ ಗುಣಮಟ್ಟದ ಈ ಮದ್ದುಗುಂಡುಗಳು ನಿಖರ ಗುರಿಗೆ ಹೆಸರುವಾಸಿ. ಒಂದು ವೇಳೆ ಗುರಿ ತಪ್ಪಿದರೂ ಅದರ ಪ್ರಮಾಣ ಕೇವಲ 2 ಮೀಟರ್ ಅಂತರದಲ್ಲಿ ಮಾತ್ರವೇ ಇರುತ್ತದೆ. ಇವು ಫಿರಂಗಿಗಳನ್ನು ಅವಲಂಬಿಸಿ 40-50 ಕಿ.ಮೀ. ವಾಪ್ತಿಯ ವರೆಗೆ ಮಾರಕ ದಾಳಿ ನಡೆಸಬಲ್ಲವು. ಜಿಪಿಎಸ್ ಆಧಾರಿತವಾಗಿ ಕಾರ್ಯ ನಿರ್ವಹಿಸುವ ವಿಶೇಷತೆ ಹೊಂದಿವೆ. 48 ಕಿಲೋ ತೂಕದ ಈ ಮದ್ದುಗುಂಡುಗಳನ್ನು ಅಮೆರಿಕದ ರೇಥಿಯನ್ ಎಂಬ ಕಂಪೆನಿ ಉತ್ಪಾದಿಸುತ್ತದೆ.
ಬೆಟಾಲಿಯನ್‌ಗಳಿಗೆ ಬಲ ತುಂಬಲು ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗುತ್ತಿದೆ. ಸಮರ್ಥ ದಾಳಿಗೆ ಹೆಸರಾದ ಎಕ್ಸ್‌ಕ್ಯಾಲಿಬರ್ ಮದ್ದು ಗುಂಡುಗಳನ್ನು ಎಂ-777 ಫಿರಂಗಿಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ’ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ರಾಯಭಾರಿ: ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನದ 4 ಮಾಧ್ಯಮಗಳನ್ನು “ಇವು ಸ್ವತಂತ್ರ ಸುದ್ದಿಸಂಸ್ಥೆಗಳಲ್ಲ, ವಿದೇಶಿ ರಾಯಭಾರಿ ಕಚೇರಿಗಳು’ ಎಂದು ಅಮೆರಿಕ ಘೋಷಿಸಿದೆ. ಚೀನ ಸೆಂಟ್ರಲ್ ಟೆಲಿವಿಷನ್, ಚೀನ ನ್ಯೂಸ್ ಸರ್ವೀಸ್, ಪೀಪಲ್ಸ್ ಡೈಲಿ ಮತ್ತು ಗ್ಲೋಬಲ್ ಟೈಮ್ಸ್‌ಗಳನ್ನು ಅಮೆರಿಕ ಈ ಪಟ್ಟಿಯಲ್ಲಿ ಹೆಸರಿಸಿದೆ. ಫೆಬ್ರವರಿಯಲ್ಲಿ ಚೀನದ ಇತರೆ 5 ಮಾಧ್ಯಮಗಳನ್ನು “ವಿದೇಶಿ ರಾಯಭಾರಿ ಕಚೇರಿಗಳು’ ಎಂದು ಅಮೆರಿಕ ಘೋಷಿಸಿತ್ತು.
“ಚೀನದ ಈ ಮಾಧ್ಯಮಗಳು ವಿಷಯಾಧಾರಿತವಾಗಿ ಸತ್ಯಗಳನ್ನು ವರದಿ ಮಾಡುವುದಿಲ್ಲ.ಇವು ಚೀನದ ಕಮ್ಯೂನಿಸ್ಟ್ ಪಾರ್ಟಿಯ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿವೆ. ಇವು ಕೇವಲ ವಿದೇಶದಲ್ಲಿನ ಪ್ರಚಾರ ಕೇಂದ್ರಗಳು’ ಎಂದು ರಾಜ್ಯ ಇಲಾಖೆಯ ವಕ್ತಾರೆ ಮೋರ್ಗನ್ ಓರ್ಟಾಗಸ್ ಆರೋಪಿಸಿದ್ದಾರೆ. ಅಮೆರಿಕದ ಈ ನಿಲುವು ಚೀನವನ್ನು ಇನ್ನಷ್ಟು ಕೆರಳಿಸಿದೆ.
Related Articles
ಚೀನದ ಯೋಜನೆಯಾಗಿರುವ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ಎರಡನೇ ಹಂತದ ಸಭೆಯಲ್ಲಿ ಪ್ರದರ್ಶಿಸಲಾದ ನಕ್ಷೆಯಲ್ಲಿ ವಿವಾದಿತ ಅಕ್ಸಾಯ್ ಚಿನ್ ಪ್ರಾಂತ್ಯವನ್ನು ಭಾರತದ ಪ್ರಾಂತ್ಯವೆಂದು ತೋರಿಸಲಾಗಿದೆ. ಏಪ್ರಿಲ್‌ನ ಕೊನೆಯ ವಾರದಲ್ಲಿ ನಡೆದಿದ್ದ ಈ ಸಭೆಯಲ್ಲಿ, ಚೀನ ಅಧಿಕಾರಿಗಳೇ ಈ ನಕ್ಷೆಯನ್ನು ಪ್ರದರ್ಶಿಸಿದ್ದಾರೆ. 1947ರಿಂದ ಇಲ್ಲಿಯವರೆಗೆ ಅಕ್ಸಾಯ್ ಚಿನ್ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಅಲ್ಲಿ ತಾನೇ ಆಡಳಿತ ನಡೆಸುತ್ತಿದೆ. ಆದರೆ, ಭಾರತ ತನ್ನ ನಕ್ಷೆಯಲ್ಲಿ ಅಕ್ಸಾಯ್ ಪ್ರಾಂತ್ಯವನ್ನು ತನ್ನದೆಂದೇ ತೋರಿಸುತ್ತದೆ. 1962ರಲ್ಲಿ ನಡೆದ ಭಾರತ-ಚೀನ ಸಮರದ ಅನಂತರ ಈ ಪ್ರಾಂತ್ಯದ ವಿಚಾರ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿದೆ.
Advertisement
ರಷ್ಯಾ ಉಪ ಪ್ರಧಾನಿ ಜತೆಗೆ ಭೇಟಿ, ಚರ್ಚೆಮಾಸ್ಕೋ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಉಪ ಪ್ರಧಾನಿ ಯೂರಿ ಇವಾನೊವಿಚ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಷ್ಯಾದ ನಾಯಕರ ಜತೆಗಿನ ಮಾತುಕತೆ ವೇಳೆ ಶಸ್ತ್ರಾಸ್ತ್ರ ಖರೀದಿ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಭಾರತದ ರಾಯಭಾರ ಕಚೇರಿ ಆವ ರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿ ಮೆಗೆ ಪುಷ್ಪ ನಮನವನ್ನೂ ಸಲ್ಲಿಸಿದ್ದಾರೆ. ಇದೇ ವೇಳೆ , ಬುಧವಾರ ಚೀನ ರಕ್ಷಣಾ ಸಚಿವರ ಜತೆಗೆ ರಾಜನಾಥ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸುವ ಪ್ರಸ್ತಾಪ ಇಲ್ಲ ಎಂದು ಹೊಸದಿಲ್ಲಿಯಲ್ಲಿ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.