Advertisement

KGF ಸಂಸ್ಥೆಯಿಂದ ರಾಮಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಪರೀಕ್ಷೆ

12:14 AM Jan 21, 2024 | Team Udayavani |

ಕೆಜಿಎಫ್‌: ಕೋಟ್ಯಂತರ ಭಾರತೀಯರು ಸುಮಾರು 500 ವರ್ಷಗಳಿಂದ ಕಾತರದಿಂದ ಎದುರು ನೋಡುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್‌ನ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ರಾಕ್‌ ಮೆಕಾನಿಕ್ಸ್‌ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.

Advertisement

ಮಂದಿರ ನಿರ್ಮಾಣಕ್ಕೆ ಬಳಸಿದ‌ ಪ್ರತಿ ಯೊಂದು ಕಲ್ಲಿನ ಗುಣಮಟ್ಟ ವಿಶ್ಲೇಷಣೆ, ಪರೀಕ್ಷೆಗಳು ಇಲ್ಲಿನ ಎನ್‌ಐಆರ್‌ಎಂ ಸಂಸ್ಥೆ ಯೇ ಮಾಡಿದೆ. ಈ ಕಲ್ಲುಗಳ ಪರೀಕ್ಷಾ ಕಾರ್ಯವನ್ನು ಕೈಗೊಂಡ ವ್ಯಕ್ತಿ ಎನ್‌ಐಆರ್‌ಎಂನ ಪ್ರಿನ್ಸಿಪಲ್‌ ಸೈಂಟಿಸ್ಟ್‌ ಮತ್ತು ಎಚ್‌ಒಡಿ ಡಾ| ಎ.ರಾಜನ್‌ ಬಾಬುರವರು ಕನ್ನಡಿಗರು.
ಇಲ್ಲಿ ವೈಜ್ಞಾನಿಕ ಸಹಯಕರಾದ ರಾಯ್‌ಸ್ಟನ್‌ ಏಂಜಲೋ ವಿಕ್ಟರ್‌, ಡಿ.ಪ್ರಶಾಂತ್‌ ಕು ಮಾರ್‌, ಪ್ರಭು ಆರ್‌., ಎಸ್‌. ಬಾಬು ಇವರು ಕಲ್ಲಿನ ತಪಾಸಣೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ರಾಮಮಂದಿರದ ಮುಖ್ಯ ಕನ್ಸಲ್ಟೆಂಟ್‌ಗಳಾದ ಎಲ್‌ ಆ್ಯಂಡ್‌ ಟಿ ಕಂಪೆನಿ ಮತ್ತು ಟಿಸಿ ಎಲ್‌(ಟಾಟಾ) ಕಂಪೆನಿಯವರು ವಹಿಸಿ ಕೊಂಡಿ ದ್ದು, ಕಲ್ಲಿನ ಪರೀಕ್ಷೆ ಮಾಡುವ ಕಾರ್ಯವನ್ನು ಎನ್‌ಐಆರ್‌ಎಂ ಸಂಸ್ಥೆಗೆ ನೀಡಿದ್ದರು.

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮೂರು ಮಾದರಿಯ ಕಲ್ಲುಗಳನ್ನು ಬಳಕೆ ಮಾಡ ಲಾಗಿದ್ದು, ತಳಪಾಯಕ್ಕೆ ಗ್ರಾನೈಟ್‌ ಮಾದರಿಯ ಕಲ್ಲುಗಳನ್ನು, ಸೂಪರ್‌ ಸ್ಟ್ರಕ್ಚರ್‌ ಕಲ್ಲುಗಳನ್ನು ಕಾಲಂ, ಕಾರ್ವಿಂಗ್ಸ್‌, ಭೀಮ್ಸ್‌ ಗಳಿಗೆ ಮತ್ತು ಡೆಕೊರೇಟಿವ್‌ ಕಲ್ಲುಗಳನ್ನು ದೇವಾಲಯಕ್ಕೆ ಅಂದವನ್ನು ನೀಡಲು ಬಳಸಲಾಗಿದೆ.

ಕರ್ನಾಟಕದ ಕಲ್ಲುಗಳೂ ಪರೀಕ್ಷೆ

ಕರ್ನಾಟಕದ ಸಾದರಹಳ್ಳಿ, ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರಿನ ಶಿರಾದಿಂದ ಕಲ್ಲುಗಳನ್ನು ಪರೀಕ್ಷೆ ಗೊಳಪಡಿಸಿ ಅನುಮೋದನೆ ನೀಡಲಾಗಿದೆ. 7 ಪದರಗಳುಳ್ಳ ದೇವಾಲಯದ ತಳಪಾಯ ನಿರ್ಮಾಣಕ್ಕೆ 1.2 ಮೀಟರ್‌ ಉದ್ದ ಮತ್ತು 0.80 ಸೆಂ.ಮೀ ಅಗಲ ಸೇರಿದಂತೆ ವಿವಿಧ ಅಳತೆ ಯ ಒಟ್ಟು 20,700 ಕಲ್ಲುಗಳನ್ನು ಅಂದರೆ ಶೇ.60ರಷ್ಟು ಕಲ್ಲುಗಳನ್ನು ತಳಪಾಯಕ್ಕೆ ಬಳಸಲಾಗಿದೆ. ಅಲ್ಲದೇ ಇವುಗಳನ್ನು ಇಂಟರ್‌ ಲಾಕಿಂಗ್‌ ಪದ್ಧತಿಯ ಮೂಲಕ ಅಳವಡಿಸಿರುವುದು ವಿಶೇಷವಾಗಿದೆ.

Advertisement

ಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡುವ ಅದೃಷ್ಟ ದೊರೆತಿದ್ದು ನಮ್ಮ ಸೌಭಾಗ್ಯ. ದೇವಾಲಯ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕೂಲಿ ಕಾರ್ಮಿಕರಿಂದ ಹಿಡಿದು ಅತ್ಯುನ್ನತ ಹುದ್ದೆಯ ಅಧಿ ಕಾರಿಯವರೆಗೆ ಯಾರೊಬ್ಬರೂ ಧೂಮಪಾನ, ಮದ್ಯಪಾನ ಮಾಡಿಲ್ಲ. ಕೆಟ್ಟ ಪದ ಮಾತನಾಡದೇ ಶಿಸ್ತು, ಸಂಯಮ, ಶ್ರದ್ಧೆ, ಭಕ್ತಿಯಿಂದ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡಿದ್ದರು.
ಡಾ| ರಾಜನ್‌ಬಾಬು ಎ., ವಿಜ್ಞಾನಿ, ಎನ್‌ಐಆರ್‌ಎಂ, ಕೆಜಿಎಫ್‌

ಚಾಕ್‌ ಪೆನ್ಸಿಲ್‌ನಲ್ಲಿ ಅರಳಿದ ರಾಮಮಂದಿರ

ಮುದಗಲ್ಲ: ಮೈಕ್ರೋ ಆರ್ಟಿಸ್ಟ್‌ನಲ್ಲಿ ವಿಶ್ವ ದಾಖಲೆ ಮಾಡಿರುವ ರಾಯಚೂರು ಜಿಲ್ಲೆ ಮುದಗಲ್ಲ ಪಟ್ಟಣದ ನಿವಾಸಿ ನಳಿನಾ ನವೀನ್‌ಕುಮಾರ್‌ ತಾವರಗೇರಿ ಚಾಕ್‌ ಪೆನ್ಸಿಲ್‌ ಬಳಸಿ ಅಯೋಧ್ಯೆ ರಾಮಮಂದಿರದ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಸುಮಾರು ಎಂಟು ತಾಸುಗಳಲ್ಲಿ ಇದನ್ನು ರಚಿಸಿದ್ದು, ಅವರ 100ನೇ ಕಲಾಕೃತಿ ಇದಾಗಿದೆ. ಎತ್ತರ 4.5 ಸೆಂ.ಮೀ, ಉದ್ದ 4.5 ಸೆಂ.ಮೀ ಹಾಗೂ ಅಗಲ 5 ಸೆಂ.ಮೀ ಇದೆ ಎಂದು ನಳಿನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next