Advertisement

ಸಾರಿಗೆ ನೌಕರರ ಮೇಲೆ ಹೇರುತ್ತಿರುವ ಈ ತುರ್ತು ಪರಿಸ್ಥಿತಿ ಸರಿಯಲ್ಲ : ಮಾಜಿ ಶಾಸಕ ಕೋನರಡ್ಡಿ

03:49 PM Apr 17, 2021 | Team Udayavani |

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಜೀವಂತ ಇರಿಸಿ ಸರಕಾರ  ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ತಾಯಿ ಹೃದಯದಿಂದ ಮುಷ್ಕರನಿರತರನ್ನು ಕರೆದು ಮಾತುಕತೆ ಮೂಲಕ ಬಗೆಹರಿಸುವ ಕೆಲಸಕ್ಕೆ ಸರಕಾರ ಮುಂದಾಗಬೇಕು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮುಷ್ಕರ ನಿರತರನ್ನು ಕರೆದು ಮಾತುಕತೆ ನಡೆಸಿ. ಸದ್ಯಕ್ಕೆ ಕಲವೊಂದು ಬೇಡಿಕೆಗಳನ್ನು ಈಡೇರಿಸಿ ಕೆಲವೊಂದಕ್ಕೆ ಸಮಯವಕಾಶ ತೆಗೆದುಕೊಳ್ಳಬಹುದಿತ್ತು. ಇಂತಹ ಕೆಲಸಕ್ಕೆ ಸರಕಾರ ಮುಂದಾಗದೆ ಮೊಂಡಾಟಕ್ಕೆ ಬಿದ್ದಿರುವುದು ಇಷ್ಟುದಿನ ನಡೆಯಲು ಕಾರಣವಾಗಿದೆ. ಇದರಿಂದ ಜನರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗಕ್ಕೆ ಸಾರಿಗೆ ಸೇವೆ ಸಂಪರ್ಕ ಇಲ್ಲದಂತಾಗಿದೆ. ಕೂಡಲೇ ಸರಕಾರ ಮುಷ್ಕರ ನಿರತರನ್ನು ಕರೆದು ಚರ್ಚೆಯ ಮೂಲಕ ಬಗೆಹರಿಸಬೇಕು. ನೌಕರರು ಕೂಡ ಒಂದಕ್ಕೆ ಜೋತು ಬೀಳದೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಂದಾನ ಮಾಡಿಕೊಳ್ಳಬೇಕು ಎಂದರು.

ಭಯದಲ್ಲಿ ನೌಕರರು: ತಮ್ಮ ಬೇಡಿಕೆಗಾಗಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಭಯದ ವಾತಾವರಣದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ತುರ್ತು ಪರಿಸ್ಥಿತಿ ಸೂಕ್ತವಲ್ಲ. ನೌಕರರು ಜನಪ್ರತಿನಿಧಿಗಳನ್ನು ಭೇಟಿಯಾಗಲು ರಾತ್ರಿ ವೇಳೆ ಕದ್ದು ಮುಚ್ಚಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಈ ಧೋರಣೆ ಸಮಂಜಸವಲ್ಲ. ಹತ್ತು ಹಲವು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪ್ರೀತಿಯಿಂದ ಇದನ್ನು ಬಗೆಹರಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಾರಿಗೆ ನೌಕರರ ಹಾಗೂ ರಾಜ್ಯದ ಜನರ ಹಿತದೃಷ್ಟಿಯಿಂದ ಮುಷ್ಕರ ಅಂತ್ಯಗೊಳಿಸುವುದು ಅಗ್ಯವಾಗಿದೆ. ಎಸ್ಮಾ ಜಾರಿ, ವಜಾದಂತಹ ಕ್ರಮ ಬಿಟ್ಟು ಸಂದಾನ ಅಗತ್ಯವಾಗಿದೆ. ಸರಕಾರ ಮೊಂಡುತನ ಮುಂದುವರೆಸಿದರೆ ಪಕ್ಷ ಸಾರಿಗೆ ನೌಕರರ ಬೆಂಬಲಿಸಿ ಹೋರಾಟಕ್ಕೆ ಮುಂದಾಗುತ್ತದೆ. ಕೋವಿಡ್-19 ನಿಯಮ ಪಾಲಿಸಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ನೌಕರರು ಕೂಡ ಪಟ್ಟು ಹಿಡಿಯದೆ ಬಗೆಹರಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next