ಚಂಡೀಗಢ್: ಭ್ರಷ್ಟಾಚಾರ ಆರೋಪದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಪಂಜಾಬ್ ಮಾಜಿ ಸಚಿವ ಸಾಧು ಸಿಂಗ್ ಧರಮ್ ಸೋಟ್ ಅವರನ್ನು ಮಂಗಳವಾರ(ಜೂನ್ 07) ಬೆಳಗ್ಗೆ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೈಕಂಪಾಡಿ: ಸ್ನೇಹಿತರ ತಲವಾರಿಗೆ ಬಲಿಯಾದ ರೌಡಿ ಶೀಟರ್ ರಾಜಾ! ಇಬ್ಬರು ಆರೋಪಿಗಳ ಬಂಧನ
ಸಾಧು ಸಿಂಗ್ ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಅರಣ್ಯ ಖಾತೆ ಸಚಿವರಾಗಿದ್ದರು. ಇಂದು ಮುಂಜಾನೆ ಭ್ರಷ್ಟಾಚಾರ ಆರೋಪದಲ್ಲಿ ಸಿಂಗ್ ಅವರನ್ನು ವಿಜಿಲೆನ್ಸ್ ಬ್ಯುರೋ (ವಿಚಕ್ಷಣ ದಳ) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಕಳೆದ ವಾರ ಜಿಲ್ಲಾ ಅರಣ್ಯಾಧಿಕಾರಿ ಗುರ್ನಾಮ್ ಪ್ರೀತ್ ಸಿಂಗ್ ಮತ್ತು ಗುತ್ತಿಗೆದಾರ ಹರ್ಮಿಂದರ್ ಸಿಂಗ್ ಹಮ್ಮೈಯನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಬಂಧಿತರು ನೀಡಿರುವ ಮಾಹಿತಿ ಆಧಾರದ ಮೇಲೆ ಮಾಜಿ ಸಚಿವ ಸಾಧು ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಧರಂಸೋಟ್ ಅವರು ಅರಣ್ಯ ಇಲಾಖೆಯಲ್ಲಿ ನಡೆಸಿದ ಅಕ್ರಮದ ಬಗ್ಗೆ ಗುರ್ನಾಮ್ ಮತ್ತು ಹರ್ಮೀಂದರ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದಲ್ಲಿ ಸಾಧು ಸಿಂಗ್ ಆಪ್ತ ಪತ್ರಕರ್ತ ಕಮಲ್ ಜಿತ್ ಸಿಂಗ್ ಅವರನ್ನೂ ಬಂಧಿಸಲಾಗಿದೆ ಎಂದು ವರದಿ ಹೇಳಿದೆ.