ಗಂಗಾವತಿ: ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಆಪ್ತರ ಕೈ ಮತ್ತೊಮ್ಮೆ ಮೇಲಾಗಿದೆ. ಗಂಗಾವತಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಇಲಿಯಾಸ್ ಖಾದ್ರಿ ಹಾಗೂ ಸದಸ್ಯರಾಗಿ ಮಂಜುನಾಥ ಕಲಾಲ್, ಗಾಯತ್ರಿ ಹಂಚಿನಾಳ ಹಾಗೂ ರಹಮತ್ ಅಲಿ ಸಂಪಂಗಿ ನೇಮಕಗೊಂಡಿದ್ದಾರೆ.
ಈಗಾಗಲೇ ಅನ್ಸಾರಿ ಕಡೆಯವರು ನಗರಸಭೆ, ಆಶ್ರಯ, ಅಕ್ರಮ ಸಕ್ರಮ ಸಮಿತಿ, ನ್ಯಾಯಾಲಯದ ಎಜಿಪಿ, ಆರಾಧನಾ ಸಮಿತಿಗಳು ಸೇರಿದಂತೆ ವಿವಿಧ ಸಮಿತಿಗಳಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ.
ಎಚ್.ಆರ್. ಶ್ರೀನಾಥ, ಮನಿಯಾರ್ ಬಣಕ್ಕೆ ಹಿನ್ನೆಡೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರದ ನಾಮನಿರ್ದೇಶಗಳನ್ನು ಪಡೆಯಲು ಯತ್ನಿಸುತ್ತಿರುವ ಮಾಜಿ ಎಂಎಲ್ಸಿ ಎಚ್ .ಆರ್. ಶ್ರೀನಾಥ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯರ್ ಅವರ ಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರನ್ನು ನಾಮನಿರ್ದೇಶನ ಮಾಡಿಸಲು ಎಚ್ .ಆರ್. ಶ್ರೀನಾಥ ಹಾಗೂ ಶಾಮೀದ ಮನಿಯಾರ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ನಾಮ ನಿರ್ದೇಶನಕ್ಕಾಗಿ ಹಲವು ಬಾರಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರನ್ನು ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಭೇಟಿಯಾಗಿ ಈಗಾಗಲೇ ಅನ್ಸಾರಿ ಕಡಿಯವರಿಗೆ ಹಲವು ಹುದ್ದೆಗಳನ್ನು ನೀಡಲಾಗಿದೆ.
ಗಂಗಾವತಿ ತಾಲೂಕಿನ ಅಧಿಕಾರಿಗಳ ವರ್ಗಾವಣೆಯನ್ನು ಅನ್ಸಾರಿಯವರ ಪತ್ರದ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ. ಗಂಗಾವತಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರನ್ನು ತಮ್ಮ ಬಣದ ಮುಖಂಡರನ್ನು ನೇಮಕ ಮಾಡುವಂತೆ ಮುಖಂಡರು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಅನ್ಸಾರಿ ಕಡೆಯವರಿಗೆ ಗಂಗಾವತಿ ಯೋಜನಾ ಪ್ರಾಧಿಕಾರದ ಹುದ್ದೆಗಳು ದೊರಕಿವೆ.