ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ನಿವೃತ್ತ ಜಡ್ಜ್ ಗಳು, ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳ ಅಧಿಕಾರಿಗಳ ಗುಂಪೊಂದು ಆಗ್ರಹಿಸಿದೆ.
ನ್ಯಾಯಪೀಠವು ನೂಪುರ್ ಶರ್ಮಾರನ್ನು ಟೀಕಿಸುವ ಮೂಲಕ ಲಕ್ಷ್ಮಣ ರೇಖೆಯನ್ನು ದಾಟಿದೆ. ಇದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಚ್ಚಳಿಯದ ಕಲೆಯನ್ನು ಮೂಡಿಸಿದೆ.
ಸರ್ವೋಚ್ಚ ನ್ಯಾಯ ಪೀಠ ನೀಡಿರುವ ಹೇಳಿಕೆಯು ದುರದೃಷ್ಟಕರ ಎಂದು ಹೈಕೋರ್ಟ್‌ಗಳ 15 ನಿವೃತ್ತ ಜಡ್ಜ್ ಗಳು, 77 ಮಂದಿ ನಿವೃತ್ತ ಅಧಿಕಾರಿಗಳು ಮತ್ತು 25 ನಿವೃತ್ತ ಯೋಧರು ನೀಡಿರುವ ಲಿಖಿತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಜತೆಗೆ, ಇದು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುವ ಕಾರಣ, ಕೂಡಲೇ ಸರಿಪಡಿಸುವ ಕ್ರಮವನ್ನು ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಜು.1ರಂದು ನೂಪುರ್ ಶರ್ಮಾ ವಿರುದ್ಧ ಕಿಡಿ ಕಾರಿದ್ದ ಸುಪ್ರೀಂ ಕೋರ್ಟ್, “ನೂಪುರ್ ಅವರ ಬೇಜ ವಾಬ್ದಾರಿಯುತ ಹೇಳಿಕೆಯು ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ. ದೇಶದಲ್ಲಿ ಏನು ನಡೆಯುತ್ತಿ ದೆ ಯೋ ಅದಕ್ಕೆಲ್ಲ ಆಕೆಯೇ ಕಾರಣ’ ಎಂದು ಹೇಳಿತ್ತು.
ಈ ನಡುವೆ, ಪೈಗಂಬರರ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಅವರ ಶಿರಚ್ಛೇದ ಮಾಡಿದ ವರಿಗೆ ತಮ್ಮ ಮನೆಯನ್ನೇ ಉಡುಗೊರೆಯನ್ನಾಗಿ ನೀಡುತ್ತೇನೆ ಎಂದು ಹೇಳಿದ್ದ ಅಜೆ¾àರ್ ದರ್ಗಾದ ಸಲ್ಮಾನ್ ಚಿಸ್ತಿ ವಿರುದ್ಧ ಜೈಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.