ನವದೆಹಲಿ: 2020ರ ಫೆಬ್ರವರಿಯಲ್ಲಿ ದೆಹಲಿ ಜೆಎನ್ ಯು ವಿವಿಯಲ್ಲಿ ನಡೆದ ಗಲಭೆಯ ಸಂಚಿನಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲೀದ್ ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ (ಅಕ್ಟೋಬರ್ 18) ನಿರಾಕರಿಸಿದೆ.
ಇದನ್ನೂ ಓದಿ:ಕಾಮೇಗೌಡರ ಪುತ್ರನಿಗೆ ಉದ್ಯೋಗ ಕೊಡುವೆ ಭರವಸೆ ಇನ್ನೂ ಈಡೇರಿಲ್ಲ: ಸಿದ್ದರಾಮಯ್ಯ
“ಜಾಮೀನು ಅರ್ಜಿ ಅಂಗೀಕರಿಸಲು ಯಾವುದೇ ಅರ್ಹತೆ ಇಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೈಕೋರ್ಟ್ ಪೀಠದ ಜಸ್ಟೀಸ್ ಸಿದ್ದಾರ್ಥ್ ಮೃದುಲ್ ಮತ್ತು ಜಸ್ಟೀಸ್ ರಜನೀಶ್ ಭಟ್ನಾಗರ್ ತಿಳಿಸಿದ್ದಾರೆ.
2020ರ ಸೆಪ್ಟೆಂಬರ್ ನಲ್ಲಿ ಯುಎಪಿಎ ಪ್ರಕರಣದಲ್ಲಿ ಉಮರ್ ಖಾಲೀದ್ ನನ್ನು ಬಂಧಿಸಲಾಗಿತ್ತು. ಜೆಎನ್ ಯು ಯೂನಿರ್ವಸಿಟಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಯಾವುದಾದರು ಕ್ರಿಮಿನಲ್ ಪಾತ್ರ ಅಥವಾ ಸಂಚಿನ ಇದೆಯೇ ಎಂಬುದನ್ನು ಪರಿಶೀಲಿಸಿ ಜಾಮೀನು ನೀಡಬೇಕೆಂದು ಉಮರ್ ಮನವಿ ಮಾಡಿಕೊಂಡಿದ್ದ. ಆದರೆ ಉಮರ್ ಜಾಮೀನು ಅರ್ಜಿಗೆ ದೆಹಲಿ ಪೊಲೀಸರು ಆಕ್ಷೇಪ ಸಲ್ಲಿಸಿದ್ದರು.
ಜೆಎನ್ ಯು ಯೂನಿರ್ವಸಿಟಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲೀದ್, ಶಾರ್ಜಿಲ್ ಇಮಾಮ್ ಸೇರಿದಂತೆ ಇತರರ ವಿರುದ್ಧ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗೆಗಳ ಭಯೋತ್ಪಾದಕ ನಿಗ್ರಹ ಕಾಯ್ದೆ) ಮತ್ತು ಐಪಿಸಿ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು. 2020ರ ಫೆಬ್ರವರಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದ್ದು, 700 ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ವೇಳೆ ಗಲಭೆ ನಡೆದಿತ್ತು. ಪ್ರಕರಣದಲ್ಲಿ ಖಾಲಿದ್ ಹೊರತುಪಡಿಸಿ ಖಾಲೀದ್ ಸೈಫಿ, ಜೆಎನ್ ಯು ವಿದ್ಯಾರ್ಥಿನಿ ನಟಾಶಾ ನರ್ವಾಲ್, ದೇವಗಂಗಾ ಕಾಲಿತಾ, ಜಾಮೀಯಾ ಕೋ ಆರ್ಡಿನೇಶನ್ ಸಮಿತಿಯ ಸದಸ್ಯ ಸಫೋರಾ ಜರ್ಗಾರ್, ಆಪ್ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಮತ್ತು ಹಲವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.