Advertisement

ತಮಿಳುನಾಡು: ಡಿಎಂಕೆ ಮಾಜಿ ಜನರಲ್ ಸೆಕ್ರೆಟರಿ ದೊರೆಸಾಮಿ ಬಿಜೆಪಿ ಸೇರ್ಪಡೆ

05:16 PM May 22, 2020 | Team Udayavani |

ಚೆನ್ನೈ: ಡಿಎಂಕೆ ಡೆಪ್ಯುಟಿ ಜನರಲ್ ಸೆಕ್ರೆಟರಿ ವಿಪಿ ದೊರೆಸಾಮಿಯನ್ನು ಪಕ್ಷದಿಂದ ವಜಾಗೊಳಿಸಿದ ಬೆನ್ನಲ್ಲೇ ಶುಕ್ರವಾರ ದೊರೆಸಾಮಿ ಭಾರತೀಯ ಜನತಾ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪಕ್ಷವನ್ನು ಸೇರ್ಪಡೆಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಹಾಗೂ ಹಿರಿಯ ಮುಖಂಡ ಲಾ ಗಣೇಶನ್ ಸಮ್ಮುಖದಲ್ಲಿ ಡಿಎಂಕೆ ಮಾಜಿ ಡೆಪ್ಯುಟಿ ಜನರಲ್ ಸೆಕ್ರೆಟರಿ ವಿಪಿ ದೊರೆಸಾಮಿ ತನ್ನ ಬೆಂಬಲಿಗರ ಜತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೊರೆಸಾಮಿ ಬಿಜೆಪಿ ಸೇರಿರುವುದನ್ನು ಬಿಜೆಪಿ ಅಧಿಕೃತ ಟ್ವೀಟರ್ ಖಾತೆಯಲ್ಲಿ ತಮಿಳು ಭಾಷೆಯಲ್ಲಿ ಶೇರ್ ಮಾಡಿರುವುದಾಗಿ ವರದಿ ವಿವರಿಸಿದೆ. ಡಿಎಂಕೆ ಪಕ್ಷದ ದೊರೆಸಾಮಿಯನ್ನು ವಜಾಗೊಳಿಸಿರುವುದಾಗಿ ಅಧ್ಯಕ್ಷ ಎಂಕೆ ಸ್ಟಾಲಿನ್ ಗುರುವಾರ ಘೋಷಿಸಿದ್ದರು.

ದೊರೆಸಾಮಿ ಕಳೆದ ಕೆಲವು ದಿನಗಳಿಂದ ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸುತ್ತಿರುವುದು ಗಮನಕ್ಕೆ ಬಂದ ನಂತರ ಡೆಪ್ಯುಟಿ ಜನರಲ್ ಸೆಕ್ರೆಟರಿ ಹುದ್ದೆಯಿಂದ ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next