ಪಾಟ್ನಾ: ಇತ್ತೀಚೆಗಷ್ಟೇ ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಇಂದು ಸಂಜೆ ಸೇರ್ಪಡೆಯಾಗಲಿದ್ದಾರೆ.
ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬಳಿಕ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
ಬಿಹಾರ ಡಿಜಿಪಿ ಸ್ಥಾನಕ್ಕೆ ಪಾಂಡೆ ಕಳೆದ ವಾರವಷ್ಟೇ ರಾಜೀನಾಮೆ ನೀಡಿ, ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದರು. ಆಗಲೇ ತಾನು ರಾಜಕೀಯ ಸೇರುವುದಾಗಿ ಇಚ್ಚೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ? : ಪ್ರತಾಪ್ ಸಿಂಹ
ಮಹತ್ವದ ಬೆಳವಣಿಗೆಯಲ್ಲಿ ಶನಿವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಡಿಜೆಪಿಯಾಗಿ ಕೆಲಸ ನಿರ್ವಹಿಸಲು ಸ್ವತಂತ್ರ ನೀಡಿದ್ದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಲು ಬಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ ಎಂದಿದ್ದರು.
ಬಿಹಾರ ವಿಧಾನಸಭೆ ಚುನಾವಣೆಯು ಮೂರು ಹಂತದಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತ, ನವೆಂಬರ್ 3ರಂದು ಎರಡನೇ ಹಂತ ಮತ್ತು ನವೆಂಬರ್ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.